/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಸೂಳೆಕೆರೆ ಉಳಿಸಿ ಅಭಿಯಾನಕ್ಕೆ ಬೆಂಬಲ ನೀಡಲು ಸಿರಿಗೆರೆ ಶ್ರೀಗಳಿಗೆ ಮನವಿ

Published

on

ಸುದ್ದಿದಿನ ವಿಶೇಷ: ಖಡ್ಗ ಸಂಘ ನಡೆಸುತ್ತಿರುವ‌ ಚನ್ನಗಿರಿ ತಾಲೂಕಿನ ‘ಸೂಳೆಕೆರೆ ಉಳಿಸಿ’ ಅಭಿಯಾನ ತೀವ್ರ ಸ್ವರೂಪ ಪಡೆದಿದ್ದು, ಕನ್ನಡ ಚಿತ್ರರಂಗದ ಗಣ್ಯರು, ಹೋರಾಟಗಾರರು, ಮಠಾಧೀಶರು ಬೆಂಬಲ ವ್ಯಕ್ತ ಪಡಿಸಿದ್ದಾರೆ.

ಸೋಮವಾರ ಖಡ್ಗ ಸಂಘದ ಪದಾಧಿಕಾರಿಗಳು ಚಿತ್ರನಟ ಕಿಶೋರ್, ಕಲಾವಿದೆ ರೂಪ ಅಯ್ಯರ್ ಅವರ ನೇತ್ರತ್ವದಲ್ಲಿ ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ಭೇಟಿ ಅಭಿಯಾನಕ್ಕೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.

ಸೋಮವಾರದ ನ್ಯಾಯಪೀಠದಲ್ಲಿ ಸೂಳೆಕೆರೆ ಒತ್ತುವರಿ ತಡೆ ಕುರಿತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ಸಿರಿಗೆರೆ ಶ್ರೀಗಳು ಖಡ್ಗ ಸಂಘ ನಡೆಸುತ್ತಿರುವ‌ ಅಭಿಯಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಜನ ಸೂಳೆಕೆರೆಯಿಂದ ಕುಡಿಯುವ ನೀರು ಪಡೆಯುತ್ತಾರೆ. ಆದರೆ ಅದರ ಸಂರಕ್ಷಣಾ ಕುರಿತು ಯೋಚಿಸುವುದಿಲ್ಲ. ಖಡ್ಗ ಸಂಘ ಉತ್ತಮ ಕಾರ್ಯ ಹಮ್ಮಿಕೊಂಡಿದ್ದಾರೆ. ಈ ಕುರಿತು ಪರಿಶೀಲಿಸಿ ಮುಂದಿನ ಮುಂದಿನ ಕ್ರಮದ ಕುರಿತು ನಿರ್ಧಾರ ತೆಗೆದುಕೊಳ್ಳುತ್ತವೆ ಎಂದು ಶ್ರೀಗಳು ಹೇಳಿದರು. ಈ ವೇಳೆ ಚಿತ್ರನಟ ಕಿಶೋರ್, ಕಲಾವಿದೆ ರೂಪ ಅಯ್ಯರ್ ಸೇರಿದಂತೆ ಹಲವರು‌ ಇದ್ದರು.

Leave a Reply

Your email address will not be published. Required fields are marked *

Trending

Exit mobile version