ದಿನದ ಸುದ್ದಿ
ವಿಧಾನಸಭಾ ಚುನಾವಣೆ | ಸಕಲವೂ ಸಿದ್ಧ : ಕೇಂದ್ರ ಚುನಾವಣಾ ಆಯೋಗ
ಸುದ್ದಿದಿನ ಬೆಂಗಳೂರು : ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ನಡೆಸುತ್ತಿರುವ ಸಿದ್ಧತೆಗಳ ಕುರಿತು ಕೇಂದ್ರ ಚುನಾವಣಾ ಆಯೋಗ ನಿನ್ನೆ ಸಮಗ್ರ ಪರಿಶೀಲನೆ ನಡೆಸಿತು.
ಚುನಾವಣಾ ವ್ಯವಸ್ಥೆಗಳು, ಕಾನೂನು ಮತ್ತು ಸುವ್ಯವಸ್ಥೆಯ ಸಮನ್ವಯದ ಕುರಿತು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ಕುಮಾರ್ ನಿನ್ನೆ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು ಮತ್ತು ಜಾರಿ ಸಂಸ್ಥೆಗಳ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಸಂಪೂರ್ಣ ಮಾಹಿತಿ ಕಲೆ ಹಾಕಿದರು.
ಭಾರತದ ಚುನಾವಣಾ ಆಯೋಗ ಏರ್ಪಡಿಸಿದ್ದ ಈ ಚುನಾವಣಾ ಸಂವಾದದಲ್ಲಿ ಕರಾವಳಿ ಭದ್ರತಾ ಪಡೆ, ಮಾದಕ ವಸ್ತು ನಿಯಂತ್ರಣ ಪಡೆ, ಕರ್ನಾಟಕ ಮತ್ತು ಗಡಿ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಭಾಗವಹಿಸಿದ್ದರು.
ಪರಿಶೀಲನಾ ಸಭೆಯಲ್ಲಿ ಮುಖ್ಯ ಆಯುಕ್ತ ರಾಜೀವ್‌ಕುಮಾರ್ ರಾಜ್ಯ ಗಡಿಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಲು ರಾಜ್ಯ ತಂಡಗಳಿಗೆ ನಿರ್ದೇಶನ ನೀಡಿದರು. ಅಕ್ರಮ ನಗದು, ಮದ್ಯ, ಮಾದಕ ವಸ್ತು ಮತ್ತು ಉಚಿತ ವಸ್ತುಗಳ ಯಾವುದೇ ಗಡಿಯಾಚೆಯ ಚಲನೆ ನಡೆಯದಂತೆ ಖಚಿತಪಡಿಸಿಕೊಳ್ಳಲು ಆರು ನೆರೆಯ ರಾಜ್ಯಗಳ 185ಅಂತಾರಾಜ್ಯ ಚೆಕ್ ಪೋಸ್ಟ್‌ಗಳ ಮೇಲೆ ಸತತ ನಿಗಾ ಇಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಇಲ್ಲಿಯವರೆಗೆ 305 ಕೋಟಿ ರೂ.ಗೂ ಅಧಿಕ ಹಣ ವಶಪಡಿಸಿಕೊಂಡಿರುವುದರ ಕುರಿತು ಅಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕರಾವಳಿ ಭದ್ರತಾ ಪಡೆ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿಗಾ ಇರಿಸಲು ಮತ್ತು ಮಾದಕ ದ್ರವ್ಯಗಳ ಹಾವಳಿಗೆ ಕಡಿವಾಣ ಹಾಕಲು ಅವರು ಸೂಚಿಸಿದರು.
ಇದೇ ವೇಳೆ ಸಾಮಾಜಿಕ ಜಾಲತಾಣಗಳ ಮೇಲೆ ಸಂಪೂರ್ಣ ನಿಗಾ ಇಡುವಂತೆ ಅಧಿಕಾರಿಗಳಿಗೆ ತಿಳಿಸಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗಳತ್ತ ಧಾವಿಸಿ ಮತದಾನ ಮಾಡುವಂತೆ ಕೊನೆ ಕ್ಷಣದವರೆಗೂ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಚುನಾವಣಾ ವಾತಾವರಣವನ್ನು ಹಾಳು ಮಾಡುವ ಮತಿಯ ಶಕ್ತಿಗಳಿಗೆ ಕಡಿವಾಣ ಹಾಕಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದರು.
'बनें सतर्क और जागरूक मतदाता'
मतदान से पहले अपने उम्मीदवारों के बारे में अवश्य जानें। 'Know Your Candidate' ऐप डाउनलोड करें और अपने क्षेत्र के उम्मीदवारों की पृष्ठभूमि व अन्य विवरणों की जानकारी प्राप्त करें।
iOS- https://t.co/hOUCd40mBb
Android- https://t.co/MU0AO4BSvH#KYC pic.twitter.com/vtt5mCXXbY— Election Commission of India #SVEEP (@ECISVEEP) May 2, 2023
ಸುದ್ದಿದಿನ.ಕಾಂ|ವಾಟ್ಸಾಪ್|9980346243