ರಾಜಕೀಯ
ವಿಧಾನಸಭೆ ಕಲಾಪ | ಜನರಿಗೆ ಹಿಂಸೆ ಕೊಡುವುದರಲ್ಲಿ ಜಗತ್ತಿನಲ್ಲಿಯೇ ನಿಪುಣರು ಅರಣ್ಯ ಇಲಾಖೆಯವರು : ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ
ಸುದ್ದಿದಿನ,ಬೆಳಗಾವಿ : ಇಂದು ವಿಧಾನಸಭೆ ಕಲಾಪಕ್ಕೆ ಹಾಜರಾದಸಿ.ಎಂ.ಉದಾಸಿಯವರಿಗೆ, ಉದಾಸಿಯವರೇ ಕಾಣಲೇ ಇಲ್ಲ ಎಂದ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಇವತ್ತು ಹಾಜರಾಗ್ತಿದ್ದೇನೆ ಸಾರ್ ಎಂದರು ಉದಾಸಿ ಅವರು. ನಂತರ ಆರೋಗ್ಯ ಸರಿಯಾಯ್ತಾ ಎಂದ ಸ್ಪೀಕರ್ ಕೇಳಿದರು. ಆರೋಗ್ಯ ಸುಧಾರಿಸಿದೆ ಸಾರ್ ಎಂದರು ಸಿ.ಎಂ.ಉದಾಸಿ.
ನಂತರ ನಡೆದ ಕಲಾಪದಲ್ಲಿ, ಸಣ್ಣ ನೀರಾವರಿ ಯೋಜನೆಗಳನ್ನು ಕ್ಷೇತ್ರವಾರು ಮಾಡುವುದು ಅವೈಜ್ಞಾನಿಕವಾದ್ದದ್ದು, ಕೆರೆಗಳಲ್ಲಿ ಜಾಲಿ ಮುಳ್ಳು ಬೆಳೆಸಿರುವುದು ತಪ್ಪು. ಅರಣ್ಯ ಇಲಾಖೆಯವರಿಗೆ ಹೇಳಿ ಜನರಿಗಾದರೂ ಅವನ್ನು ಕಡಿಯಲು ಹೇಳಿ, ಕೆರೆ ಎಂದರೆ ತಾಯಿ ಇದ್ದಂತೆ ಅಲ್ಲಿ ಹೋಗಿ ಜಾಲಿ ಗಿಡದ ಮುಳ್ಳು ಬೆಳೆಸಿದ್ದೀರಿ ನೋಡಿದರೆ ಹೊಟ್ಟೆ ಉರಿಯುತ್ತೆ
ಎಂದು ಅಸಮಾಧಾನ ವ್ಯಕ್ತ ಪಡಿಸಿದರು ಸ್ಪೀಕರ್ ರಮೇಶ್ ಕುಮಾರ್ ಅವರು.
ಇದಕ್ಕೇನಾ ರಾಜಮಹಾರಾಜರು ಕೆರೆ ಕಟ್ಟಿದ್ದು?
ಅವರು ಕಟ್ಟಿದ ಕರೆಗಳಿಗೆ ಮುಳ್ಳು ಹಾಕಿದ್ದೀರಿ. ಸರ್ಕಾರದ ನಿಲುವನ್ನು ಇಲ್ಲೇ ಹೇಳಿ. ಸರ್ವನಾಶಕ್ಕಾಗಿ ಮುಳ್ಳು ಹಾಕಿದ್ದೀರಾ? ನಮ್ಮ ಕೆರೆಗಳಲ್ಲಿ ಮುಳ್ಳಿನ ಗಿಡಗಳಿರುವುದು ಇಷ್ಟವಿಲ್ಲ ತಕ್ಷಣವೇ ನಿಮ್ಮ ನಿಲುವನ್ನು ಇಲ್ಲೇ ಪ್ರಕಟಿಸಿ ಎಂದರು ಸ್ಪೀಕರ್ ಅವರು.ಹಾಗೆ ಎಲ್ಲಾ ಅಧಿಕಾರಿಗಳಿಗೆ ಮೂರು ಸಭೆಮಾಡಿ ಸೂಚನೆ ಕೊಟ್ಟಿದ್ದೇನೆ. ಜಾಲಿ ಮರದ ತೆರವಿಗೆ ನಿಮ್ಮ ಸೂಚನೆಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.
ಜನರಿಗೆ ಆ ಮರಗಳನ್ನು ತೆಗೆದುಕೊಂಡು ಹೋಗಲು ಹೇಳುತ್ತೇವೆ ಎಂದ ಸಣ್ಣ ನೀರಾವರಿ ಸಚಿವರು. ಅರಣ್ಯ ಇಲಾಖೆಗಿಂತ ಜನರಿಗೆ ತೊಂದರೆ ಕೊಡುವವರು ಬೇರೆ ಯಾರು ಇಲ್ಲ ಅವರು ಜನರಿಗೆ ಹಿಂಸೆ ಕೊಡುವುದರಲ್ಲಿ ಜಗತ್ತಿನಲ್ಲಿಯೇ ನಿಪುಣರು ಎಂದರು ಸ್ಪೀಕರ್ ರಮೇಶ್ ಕುಮಾರ್.
ಸುದ್ದಿದಿನ.ಕಾಂ|ವಾಟ್ಸಾಪ್|9986715401