ರಾಜಕೀಯ

ಪಾಕ್ ಹುಟ್ಟಡಗಿಸಿದ್ದ ವಾಜಪೇಯಿ

Published

on

ಸುದ್ದಿದಿನ ವಿಶೇಷ | ಅದು 13 ಡಿಸೆಂಬರ್‌ 2001. ಅಂದು ಮುಸುಕುಧಾರಿ ಗುಂಪೊಂದು ದೆಹಲಿಯ ಸಂಸತ್ತು ಭವನದಲ್ಲಿ ದಾಳಿ ನಡೆಸಲು ಮುತ್ತಿಕೊಂಡಿತ್ತು. ಅಮೆರಿಕಾ ಘಟನೆ ನಡೆದು ಮೂರು ತಿಂಗಳೊಳಗೆ ಭಾರತದ ಸಂಸತ್ತಿನ ಮೇಲೆ ಪಾಕುಸ್ತಾನದ ಉಗ್ರರು ಅಟ್ಟಹಾಸ ಮೆರೆಯಲು ಮುಂದಾಗಿದ್ದರು. ಆದರೆ, ಸಂಸತ್ತಿನ ಭದ್ರತಾ ಪಡೆ ವೀರಾವೇಷದಿಂದ ಉಗ್ರರನ್ನು ಹಿಮ್ಮೆಟ್ಟಿದ್ದರು. ಆದರೆ, ಪಾಕಿಸ್ತಾನ ಸರ್ಕಾರವು ಆಕ್ರಮಣ ಮಾಡಿದವರು ನಮ್ಮವರಲ್ಲ ಸಮರ್ಥಿಸಿಕೊಂಡಿತು.

ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಾರತದ ಸೇನಾಪಡೆಯನ್ನು ಸಿದ್ಧಗೊಳಿಸಿದರು. ಭಾರತದ ಪಂಜಾಬ್, ರಾಜಸ್ಥಾನ, ಗುಜರಾತ್ ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ 500,000 ಸೈನಿಕರನ್ನು ಒಟ್ಟುಗೂಡಿಸಿದರು. ಇದರ ಪರಿಣಾಮ ಎರಡು ದೇಶಗಳಲ್ಲಿ ಎರಡು ವರ್ಷಗಳ ಕಾಲ ಯುದ್ಧದ ವಾತಾವರಣ ಉಂಟಾಗಿತ್ತು. ಈ ಮೂಲಕ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಟ್ಟರು.

ಭಯೋತ್ಪಾದಕ ಕೃತ್ಯಗಳ ಹತೋಟಿಗೆ ತರುವ ನಿಟ್ಟಿನಲ್ಲಿ ವಾಜಪೇಯಿ ಸರ್ಕಾರವು ಪ್ರತಿಪಕ್ಷಗಳ ವಿರೋಧದ ನಡುವೆಯೂ ಭಯೋತ್ಪಾದನಾ ತಡೆ ಕಾಯ್ದೆ ಜಾರಿಗೊಳಿಸಿತು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version