ದಿನದ ಸುದ್ದಿ

ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ 31ನೇ RANK ಪಡೆದ ದಾವಣಗೆರೆಯ ಅವಿನಾಶ್

Published

on

ಸುದ್ದಿದಿನ ಡೆಸ್ಕ್ : 2021 ನೇ ಸಾಲಿನ UPSC ಪರೀಕ್ಷೆಯಲ್ಲಿ ದಾವಣಗೆರೆಯ ಅವಿನಾಶ್ 31 ನೇ ಬ್ಯಾಂಕ್ ಪಡೆದಿದ್ದಾರೆ.

ಅವಿನಾಶ್ ಅವರು ನಗರದ ಜನತಾ ಲಾಡ್ಜ್, ಜನತಾ ಡಿಲಕ್ಸ್, ಆನಂದ ರೆಸಿಡೆನ್ಸಿ ಮಾಲೀಕರಾದ ವಿಠಲರಾವ್ ಅವರ ಪುತ್ರ.ಬೆಂಗಳೂರಿನ ‘ಇನ್‌ಸೈಟ್ ಐಎಎಸ್’ ಕೋಚಿಂಗ್ ಸೆಂಟರ್‌ನಲ್ಲಿ ಒಂದು ವರ್ಷ ತರಬೇತಿಯನ್ನು ಪಡೆದು ಯುಪಿಎಸ್‌ಸಿ ಪರೀಕ್ಷೆಯನ್ನು ಬರೆದಿದ್ದರು. ಮೊದಲ ಪ್ರಯತ್ನದಲ್ಲೇ 31ನೇ ಬ್ಯಾಂಕ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ನಗರದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವಿನಾಶ್, ತೋಳಹುಣಸೆಯ ಪಿಎಸ್ಎಸ್ಎಇಎಂಆರ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿದ್ದರು. ಧವನ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ಮುಗಿಸಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ 2020ರಲ್ಲಿ ಐದು ವರ್ಷಗಳ ಕಾನೂನು ಪದವಿಯನ್ನು ಪಡೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version