ದಿನದ ಸುದ್ದಿ
ಅಮಿತ್ ಶಾ ಅವರೆ, ಕೊಲೆ ಆರೋಪವಿರುವ ನೀವು ಮತದಾರರ ರೋಲ್ ಮಾಡೆಲ್ ಹೇಗೆ ? : ಬಿ.ಕೆ. ಹರಿಪ್ರಸಾದ್
ಸುದ್ದಿದಿನ ಡೆಸ್ಕ್ : ಬೆಂಗಳೂರು ನಗರಕ್ಕೆ ಅದರಲ್ಲಿಯೂ ನಾನು ಸ್ಪರ್ಧಿಸುತ್ತಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಹಾ ಅವರಿಗೆ ಸುಸ್ವಾಗತ. ಈ ಸಂದರ್ಭದಲ್ಲಿ ನನ್ನ ನಗರದ ಪರವಾಗಿ ನಿಮ್ಮಲ್ಲಿ ಕೆಲವು ಪ್ರಶ್ನೆಗಳಿವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಅಮಿತ್ ಶಾ ಗೆ ಪ್ರಶ್ನೆಗಳು
- ಕೊಲೆಯೂ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊತ್ತಿರುವ ನೀವು ಕರ್ನಾಟಕದ ಪ್ರಬುದ್ಧ, ಪ್ರಜ್ಞಾವಂತ ಯುವ ಮತದಾರರಿಗೆ ಯಾವ ರೀತಿಯ ರೋಲ್ ಮಾಡೆಲ್ ಆಗಲು ಸಾಧ್ಯ?
- 50ಸಾವಿರ ರೂಪಾಯಿಯನ್ನು 80.50 ಕೋಟಿ ರೂಪಾಯಿ ಮಾಡಿದ್ದ ನಿಮ್ಮ ಮಗನ ಕಲೆಯನ್ನು ಇಲ್ಲಿನ ಯುವಜನರಿಗೆ ಹೇಳಿಕೊಡಲು ಬರ್ತಿದ್ದೀರಾ?
- ಸಂವಿಧಾನದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
- ಪ್ರಜಾಪ್ರಭುತ್ವದ ಬಗ್ಗೆ ನಿಮ್ಮ ಬದ್ಧತೆ ಏನು?
- ಮಹಿಳಾ ಮೀಸಲಾತಿ ಬಗ್ಗೆ ನಿನ್ನ ನಿಲುವು ಏನು?
ಸುದ್ದಿದಿನ.ಕಾಂ|ವಾಟ್ಸಾಪ್|9986715401