ರಾಜಕೀಯ
ಬ್ರೇಕಿಂಗ್ ನ್ಯೂಸ್; ಬಿಜೆಪಿ ಸೇರಿದ ಬಿಎಸ್ಪಿ ನಾಯಕ
ಸುದ್ದಿದಿನ ದಾವಣಗೆರೆ: ಚುನಾವಣಾ ಪೂರ್ವದಲ್ಲೇ ಮಧ್ಯಪ್ರದೇಶದ ಪರ್ವ ನಡೆದಿದ್ದು, ಬಿಎಸ್ಪಿ ಪಕ್ಷ ಹಿರಿಯ ಮುಖಂಡರೊಬ್ಬರು ಬೆಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಹುಜನ ಸಮಾಜ ಪಕ್ಷದ ಮುಖಂಡ ರಮೇಶ್ ಮಹಾಂತ್ ಬಿಎಸ್ ಪಿ ತೊರೆದು ಭಾರತೀಯ ಜನತಾ (ಬಿಜೆಪಿ) ಪಕ್ಷಕ್ಕೆ ಸೇರ್ಪಡೆಯಾದರು.
ರಮೇಶ್ ಮಹಾಂತ ಮಧ್ಯ ಪ್ರದೇಶ ರಾಜ್ಯದ ಭಿಂದಾ ಜಿಲ್ಲೆಯ ಲಹರ ವಿಧಾನ ಸಭಾ ಕ್ಷೇತ್ರದ ಹಿರಿಯ ಮುಖಂಡರಾಗಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಪಕ್ಷದ ರಾಜ್ಯಾಧ್ಯಕ್ಷ ರಾಕೇಶ್ ಸಿಂಗ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ರಾಜ್ಯಾಧ್ಯಕ್ಷ ರಾಕೇಶ್ ಸಿಂಗ್ ಅವರು ರಮೇಶ್ ಮಹಾಂತ್ ಅವರನ್ನು ಬರ ಮಾಡಿಕೊಂಡರು.