ದಿನದ ಸುದ್ದಿ

ಏರ್ ಶೋ ಗೆ ಬೆಂಗಳೂರೇ ಸೂಕ್ತ | ಎಚ್.ಡಿ‌.ಕೆ

Published

on

ಸುದ್ದಿದಿನ, ಡೆಸ್ಕ್ | ಬೆಂಗಳೂರಿನಿಂದ ಉತ್ತರ ಪ್ರದೇಶದ ರಾಜಧಾನಿ ಲಕ್ನೌದ 22 ನೇ ಆವೃತ್ತಿಯ ಏರೋ ಇಂಡಿಯಾ ಪ್ರದರ್ಶನವನ್ನು ಬದಲಾಯಿಸುವ ನಿರ್ಧಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರವನ್ನು ಕರ್ನಾಟಕ ಸರಕಾರ ಪ್ರಶ್ನಿಸಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಬೆಂಗಳೂರು ನಗರವು ಏರೋ ಇಂಡಿಯಾ ಪ್ರದರ್ಶನಕ್ಕೆ ಸರಿಯಾದ ಸ್ಥಳವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಕರ್ನಾಟಕದಲ್ಲಿನ ಬಿಜೆಪಿ ಸ್ನೇಹಿತರು ಏರ್ ಶೊ ವಿಷಯದಲ್ಲಿ ಉತ್ತರಿಸಬೇಕು. ಹಾಗೆರ ರಕ್ಷಣಾ ಸಚಿವರನ್ನು ನಾವು ಕೋರಿದ್ದೇವೆ ಮತ್ತು ಏರೋ ಶೋ ಕಾರ್ಯಕ್ರಮಕ್ಕಾಗಿ ಬೆಂಗಳೂರು ಸರಿಯಾದ ಸ್ಥಳವೆಂದು ತಿಳಿಸಿದ್ದೇವೆ ಮತ್ತು ನಾವು ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿದ್ದೇವೆ. ಅಂತಹ ನಿರ್ಧಾರವನ್ನು ಕೇಂದ್ರ ಏಕೆ ತೆಗೆದುಕೊಂಡಿದೆ ಎಂದು ನನಗೆ ಗೊತ್ತಿಲ್ಲ. ” ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715410

Leave a Reply

Your email address will not be published. Required fields are marked *

Trending

Exit mobile version