ದಿನದ ಸುದ್ದಿ

ಬ್ರೇಕಿಂಗ್ | ರಾಜ್ಯದಲ್ಲಿ ಸೋಮವಾರದಿಂದ ಎಣ್ಣೆ ಅಂಗಡಿ ಓಪನ್ : ರೆಡ್ ಝೋನ್ ಇದ್ರೂ ಸಿಗುತ್ತೆ ಎಣ್ಣೆ

Published

on

ಸುದ್ದಿದಿನ,ಬೆಂಗಳೂರು : ರಾಜ್ಯಾದ್ಯಂತ ಹೊಸ ಮಾರ್ಗಸೂಚಿ ರಿಲೀಸ್​ ಮಾಡಿದ್ದು ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಕೇಂದ್ರ ಸರ್ಕಾರದ ಸಂಪೂರ್ಣ ಮಾರ್ಗಸೂಚಿ ಪಾಲನೆ ಮಾಡಿವುದರ ಮೂಲಕಮೂರು ಝೋನ್​ಗಳಾಗಿ ಅಂದರೆ, ರೆಡ್​, ಗ್ರೀನ್​​, ಆರೆಂಜ್​​ ಝೋನ್​ಗಳಾಗಿ ವಿಂಗಡಣೆ ಮಾಡಲಾಗಿದೆ.

ಪ್ರಮುಖಾಂಶಗಳು

  1. ರೆಡ್​ ಝೋನ್​​ನಲ್ಲಿ ಕರ್ನಾಟಕದ ಆರು ಜಿಲ್ಲೆಗಳಾದ
    ಬೆಂಗಳೂರು ನಗರ, ಮೈಸೂರು, ಬೆಳಗಾವಿ, ಕಲಬುರಗಿ ಬಾಗಲಕೋಟೆ, ವಿಜಯಪುರ ರೆಡ್​ಝೋನ್​​ಗಳು.ರೆಡ್ ಝೋನ್​​ಗಳಲ್ಲಿ ಯಾವುದೇ ಸಾರಿಗೆ ಸಂಚಾರ ಇಲ್ಲ.
  2. ಎಲ್ಲಾ ಮೂರೂ ಝೋನ್​ಗಳಲ್ಲೂ ಎಣ್ಣೆ ಸಿಗಲಿದೆ
    ಮೇ 4ರಿಂದ ಎಣ್ಣೆ ಮಾರಾಟಕ್ಕೆ ಅನುಮತಿ ನೀಡಿರುವ ಸರ್ಕಾರವು 6 ಅಡಿ ಅಂತರ ಕಾಯ್ಡುಕೊಂಡು ಎಣ್ಣೆ ಖರೀದಿ ಮಾಡಬೇಕು‌ ಎಂದು ಹೇಳಿದೆ.
  3. ರೆಡ್​ ಝೋನ್​​ನಲ್ಲಿ ಸಿಂಗಲ್​​ ಶಾಪ್​ಗಳಿಗೆ ಮಾತ್ರ ಅವಕಾಶವಿದ್ದು, ಮದ್ಯ ಖರೀದಿಸುವಾಗ ಒಮ್ಮೆ ಐವರು ಮಾತ್ರ ಇರಬೇಕು. ಅಂತಾರಾಜ್ಯ ಓಡಾಟಕ್ಕೆ ಅವಕಾಶ ಇಲ್ಲವೇ ಇಲ್ಲ ಎಂದಿದೆ.
  4. ಕರ್ನಾಟಕ ರಾಜ್ಯಾದ್ಯಂತ ಮದ್ಯ ಮಾರಾಟ
    ಸೋಮವಾರ ಬೆಳಗ್ಗೆ 10ರಿಂದಲೇ‌ಎಣ್ಣೆ ಸಿಗಲಿದೆ.
  5. ಮದ್ಯದ ಪಾರ್ಸೆಲ್​​​ಗೆ ಮಾತ್ರ ಅವಕಾಶ ನೀಡಿದ ಸರ್ಕಾರವು,‌ಪಾನ್​​​, ಗುಟ್ಕಾ, ಮಸಾಲಾ ಮಾರಾಟಕ್ಕೂ ಅನುಮತಿ ನೀಡಿದೆ.
  6. ಅಂತರ್​​ ರಾಜ್ಯ, ಅಂತರ್​​ ಜಿಲ್ಲೆ ಬಸ್ ಸಂಚಾರ ಇರುವುದಿಲ್ಲ. ಆಯಾ ಜಿಲ್ಲೆಗಳಲ್ಲೇ ಶೇ.50ರಷ್ಟು ಬಸ್ ಸಂಚಾರ, ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ಗಳು ಓಡಾಡಲ್ಲ.ಮೆಟ್ರೋ ರೈಲುಗಳ ಸಂಚಾರವೂ ಇರೋದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version