ದಿನದ ಸುದ್ದಿ
ತೊಗರಿ, ಕಡಲೆಕಾಳು ಮತ್ತು ಮೆಕ್ಕೆಜೋಳ ಬೆಂಬಲ ಬೆಲೆ : ಖರೀದಿಗೆ ಮುಖ್ಯಮಂತ್ರಿಗಳ ಆದೇಶ
ಸುದ್ದಿದಿನ,ಬೆಂಗಳೂರು : 2019-2020 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿಯನ್ನು ಕೇಂದ್ರ ಘೋಷಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ ಗೆ 5800 ರೂಪಾಯಿ ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹಧನ 300 ರೂಪಾಯಿ ಸೇರಿ 6100 ರೂಪಾಯಿಯಂತೆ 2,27,500 ಮೆಟ್ರಿಕ್ ಟನ್ ಅನ್ನು ರೈತರಿಂದ ಖರೀದಿಸಲು ಆದೇಶಿಸಲಾಗಿದೆ.
ಎಫ್ ಎ ಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿಸಲು ನೋಂದಣಿ ಅವಧಿಯನ್ನು ದಿನಾಂಕ 12/05/2020 ರವರೆಗೆ ಹಾಗೂ ಖರೀದಿ ಅವಧಿಯನ್ನು 25/05/2020 ರವರೆಗೆ ವಿಸ್ತರಿಸಲಾಗಿದೆ.ಪ್ರತಿ ಕ್ವಿಂಟಾಲ್ ಗೆ 4875 ರೂಪಾಯಿಗಳಂತೆ ಗರಿಷ್ಠ 1,43,390 ಮೆಟ್ರಿಕ್ ಟನ್ ಕಡಲೆಕಾಳು ಖರೀದಿಸಬಹುದಾಗಿದೆ.
ಮೆಕ್ಕೆಜೋಳ ಬೆಳೆದಿರುವ ರೈತರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಕ್ವಿಂಟಾಲ್ ಗೆ 1760 ರೂ. ಬೆಂಬಲ ಬೆಲೆಗೆ 20 ಸಾವಿರ ಟನ್ ಖರೀದಿಸಲು ಮುಂದಾಗಿದೆ. ಕರ್ನಾಟಕ ಹಾಲು ಒಕ್ಕೂಟ (ಕೆಎಂ ಎಫ್) ಮೂಲಕ ಖರೀದಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346343