ದಿನದ ಸುದ್ದಿ
ಬೆಳಗಾವಿ | ಮತ್ತೆ 3 ಜನರಲ್ಲಿ ಸೋಂಕು ಪತ್ತೆ ; ಸೋಂಕಿತರ ಸಂಖ್ಯೆ 72 ಕ್ಕೆ ಏರಿಕೆ
ಸುದ್ದಿದಿನ,ಬೆಳಗಾವಿ : ಜಿಲ್ಲೆಯಲ್ಲಿ ಶುಕ್ರವಾರ(ಮೇ 1) ಮತ್ತೆ 3 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ.
ಈ ಹೊಸ 3 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟಾರೆ 72 ಕ್ಕೆ ಏರಿದಂತಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಇಂದಿನ(ಮೇ 1) ಪ್ರಕಟಣೆಯ ಪ್ರಕಾರ ರಾಯಬಾಗ ತಾಲ್ಲೂಕಿನಲ್ಲಿ 3 ಪ್ರಕರಣಗಳು ದೃಢಪಟ್ಟಿರುತ್ತವೆ.
ಸೋಂಕಿತರ ವಿವರ
ರಾಯಬಾಗ ತಾಲ್ಲೂಕು
- ಪಿ-574(55 ವರ್ಷ, ಗಂಡು)
- ಪಿ-575(30 ವರ್ಷ, ಹೆಣ್ಣು)
- ಪಿ-576(50 ವರ್ಷ, ಗಂಡು)
ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟಾರೆ ಒಟ್ಟು 72 ಪ್ರಕರಣಗಳು ದೃಢಪಟ್ಟಿದ್ದು, 10 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಒಬ್ಬರು ಮೃತಪಟ್ಟಿರುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243