ದಿನದ ಸುದ್ದಿ
ಮಾದಕ ವಸ್ತು ಮಾರಾಟ ಮಾಡುವವರೆ, ಮಾದಕ ವೆಸನಿಗಳೆ ಎಚ್ಚರ; ಎಚ್ಚರ..!
ಸುದ್ದಿದಿನ ,ಬಳ್ಳಾರಿ : ಮಾದಕ ಪದಾರ್ಥಗಳಾದ ಹೊಗೆ ರಹಿತ ತಂಬಾಕು,ಚ್ವಿಂಗಮ್ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಮತ್ತು ಚ್ವಿಂಗಮ್ ಅಗೆದು ಉಗುಳಿದರೆ ದಂಡಪಾವತಿ ಗ್ಯಾರಂಟಿ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಎಚ್ಚರಿಕೆ ನೀಡಿದ್ದಾರೆ.
2003 ಸೆಕ್ಷನ್- 4ರ ಪ್ರಕಾರ ಸಾರ್ವಜನಿಕ ಸ್ಥಗಳಲ್ಲಿ ಗುಟ್ಕಾ ಉಗುಳುವುದು, ಮಾರಾಟ ಮಾಡುವದು ಸಂಪೂರ್ಣ ನಿಷಿದ್ಧ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ covid -19 ವೈರಸ್ ಹರಡೋ ಸಾಧ್ಯತೆ ಇರುವ ಹಿನ್ನಲೆ ಹೊಗೆರಹಿತ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಿದೆ.
ಜಿಲ್ಲಾಡಳಿತ ಆದೇಶವನ್ನ ಮೀರಿದರೆ ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಳ್ಳಲಾಗುವುದು.1ಬಾರಿ ಅಪರಾಧಕ್ಕೆ 1ಸಾವಿರ ದಂಡ,2ನೇ ಬಾರಿಯಾದ್ರೆ 2ಸಾವಿರ ದಂಡ, 3 ನೇಬಾರಿ ಆದೇಶ ಮೀರಿದಲ್ಲಿ 3 ಸಾವಿರ ದಂಡ ಹಾಕಲಾಗುವುದು ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243