ದಿನದ ಸುದ್ದಿ

ಸ್ವಚ್ಛತೆಯಲ್ಲಿ ಜೋಧಪುರ, ಮಾರವಾರ್ ರೈಲ್ವೆ ನಿಲ್ದಾಣ ಪ್ರಥಮ; ಆದಾಯ, ಪ್ರಯಾಣಿಕರ ಸಂಖ್ಯೆ ಆಧರಿಸಿ ಪಟ್ಟಿ ಸಿದ್ಧ

Published

on

ಸುದ್ದಿದಿನ ಡೆಸ್ಕ್: ಭಾರತದ ಸ್ವಚ್ಛ ರೈಲ್ವೆ ನಿಲ್ದಾಣಗಳಲ್ಲಿ ರಾಜ್ಯಸ್ಥಾನ ರಾಜ್ತದ ಜೋಧಪುರ ಮತ್ತು ಮಾರವಾರ್ ಪ್ರಥಮ ಸ್ಥಾನ ಪಡೆದಿವೆ. ರೈಲ್ವೆ ನಿಲ್ದಾಣದಲ್ಲಿ ಕಾಪಾಡಿಕೊಂಡಿರುವ ಸ್ವಚ್ಛತೆಯ ಆಧರದ ಮೇಲೆ ರೈಲ್ವ ಇಲಾಖೆ ಸಚಿವ ಪಿಯೂಸ್ ಗೋಯೆಲ್ ಘೋಷಿದ್ದಾರೆ.

A1 ಕೆಟಗರಿಯಲ್ಲಿ ಜೋಧಪುರ ಪ್ರಥಮ, ಜೈಪುರ್ ದ್ವಿತೀಯ, ಆಂಧ್ರಪ್ರದೇಶದ ತಿರುಪತಿ ಮೂರನೇ ಕ್ರಮಾಂಕ ಪಡೆದುಕೊಂಡಿವೆ. A ಕೆಟಗರಿಯಲ್ಲಿ ಮಾರವಾರ್ ಪ್ರಥಮ, ಫುಲೆರಾ, ತೆಲಂಗಾಣದ ವಾರಂಗಲ್ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

A1 ಮತ್ತು A ಕೆಟಗರಿಯ ರೈಲ್ವೆ ನಿಲ್ದಾಣದಲ್ಲಿ ಶೇ. ೮೦ ಆದಾಯ ಹೊಂದಿದ್ದು, ಆದಾಯ ಮತ್ತು ಪ್ರಯಾಣಿಕರ ಸಂಖ್ಯೆ ಆಧರಿಸಿ ರೈಲ್ವೆ ನಿಲ್ದಾಣಗಳನ್ನು ವಿಂಗಡಿಸಲಾಗಿದೆ.  ದೇಶದ ಯಾವೊಂದು ಪ್ರಮುಖ ಮೆಟ್ರೋ ಸ್ಟೇಷನ್‌ಗಳು ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿಲ್ಲ. ದೆಹಲಿಯ ಆನಂದ ವಿಹಾರ ನಿಲ್ದಾಣಕ್ಕೆ ಐದನೇ ಸ್ಥಾನ ದಕ್ಕಿದೆ. ದೇಶದ 407 ರೈಲ್ವೆ ನಿಲ್ದಾಣಗಳನ್ನು ಸಮೀಕ್ಷೆ ನಡೆಸಿದ್ದು, A1 ಕೆಟಗರಿಯಲ್ಲಿ 75 ಹಾಗೂ A ಕೆಟಗರಿಯಲ್ಲಿ 332 ನಿಲ್ದಾಣಗಳಿಗೆ ಸ್ವಚ್ಛತೆ ಆಧರಿಸಿ ರಾಂಕಿಂಗ್ ನೀಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version