ಅಂತರಂಗ

ಬಿತ್ತಿದವನು ಬೆತ್ತಲಾದಾನು ; ಓದಿದವ ಹುಲುಸಾದಾನು..!

Published

on

  • ನರ್ಸಿಂಗ್ ಲಮಾಣಿ, (ಗಂಗಾತನಯ)

ನಾವು ದಿನ ನಿತ್ಯ ಕಾಣುವ ನಿತ್ಯ ಸತ್ಯಗಳು ಸಾವಿರವಿದ್ದರೂ ಬಹಳಷ್ಟು ಸಲ ಕೆರೆಸಿಕೊಳ್ಳಲು ಸಮಯವಿಲ್ಲ ಎಂದು ಉದಾಸೀನತೆ ತೊರಿ ಮುನ್ನಡೆದು ಬಿಡುತ್ತೇವೆ ಎನ್ನಿ..ಆದರೆ ಅಲ್ಲೆಲ್ಲೋ ಕುಳಿತ ಸೂಕ್ಷ್ಮ ಸಂವೇದನಾಶೀಲ ಕವಿಹೃದಯ ಎಲ್ಲವನ್ನೂ ಸೂಕ್ಷ್ಮವಾಗಿಯೇ ಗ್ರಹಿಸುತ್ತಿರುತ್ತದೆ. ಅಷ್ಟಕ್ಕೆ ಸೀಮಿತವಾಗಿ ಕುಳಿತುಕೊಳ್ಳದೇ ಸ್ಪಂದನೆಯ ಟಿಸಿಲೊಡೆದು ಮರುಗುತ್ತಾ, ಮಿಡಿಯುತ್ತಾ, ಕುದಿಯುತ್ತ ತನ್ನ ಅಂತರ್ಗತ ಕಿಚ್ಚು, ಆಕ್ರೋಶ ಅಂತಃಕರಣವನ್ನು ಪದಗಳ ರೂಪದಿ ಹೊರಹಾಕುತ್ತದೆ. ಈ ಪೀಠಿಕೆಗೆ ತಾಜಾ ಉದಾಹರಣೆ ಎಂಬಂತೆ ಇತ್ತೀಚೆಗೆ ತಾನೇ ಲೋಕಾರ್ಪಣೆಗೊಂಡು ಕೈ ಸೇರಿದ “ಬಿತ್ತಿದವನು ಬೆತ್ತಲಾದಾನು” ಕವನ ಸಂಕಲನ…

ಈ ಹೆಸರಿನಲ್ಲೇ ಒಂದು ಪಂಚ್ ಅಂತೂ ಇದ್ದೆ ಇದೆ. ಇದರ ಜನಕ ಖಡಕ್ ಕವಿ ಶ್ರೀ ಖಂಡೂ ಬಂಜಾರಾ ವೃತ್ತಿಯಿಂದ ಶಿಕ್ಷಕ ಅವರ ಲೇಖನಿಯಿಂದ ಮೂಡಿಬಂದ ಕವನ ಸಂಕಲನ ಅತ್ಯುತ್ತಮವಾಗಿ ಮೂಡಿಬಂದಿದೆ. ಬದುಕಿನ ನಾನಾ ಮಗ್ಗುಲಗಳನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸಿದ್ದಾರೆ‌. ಸಮಾಜದ ಅಂಕುಡೊಂಕುಗಳಿಗೆ ಅಲ್ಲಲ್ಲಿ ಚಾಟಿ ಬೀಸುತ್ತ ದುಡಿಯುವ ವರ್ಗದ ಬವಣೆ, ವೇದನೆಗಳನ್ನು ಮನೋಜ್ಞವಾಗಿ ಹೊರಹಾಕಿದ್ದಾರೆ.

ಅಲ್ಲದೇ ಕರೋನಾ ಮಹಾ ಮಾರಿಯ ಸಂದರ್ಭದಲ್ಲಿ ಸಮಾಜ ಸಂಬಂಧಗಳು ಅನುಭವಿಸಿದ ನೋವು, ಸಂಕಟ, ಸ್ವಾರ್ಥ, ನಿರಾಸೆ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅದಕ್ಕೂ ಮುಖ್ಯವಾಗಿ ಅನ್ನದಾತನ ಧಾರುಣ ಬದುಕಿನ ಕರಾಳತೆಯನ್ನು ಕಣ್ಣುಕಟ್ಟುವಂತೆ ಅಭಿವ್ಯಕ್ತಗೊಳಿಸಿದ್ದಾರೆ. ಸಮತೆ, ಮಮತೆಗಳು ಸಮಾಜದಲಿ ಹಾಸುಕ್ಕಾಗಿರಲಿ ಎಂಬ ಮಹದಾಸೆಯನ್ನು ಹೊತ್ತ ಈ ಕೆಳಗಿನ ಸಾಲುಗಳೇ ಸಾಕ್ಷಿ..

ಸರ್ವಸಮಾನವಾಗಲಿ ರಾಜ್ಯ.!
ಅನ್ನದಾತನ ಗಾಂಧಿತಾತನ ಗ್ರಾಮಸ್ವರಾಜ್ಯ..!
ಕಿವುಡ ಕೇಳುವ ಹಾಗೆ..!
ಕುರುಡ ನೋಡುವ ಹಾಗೆ..!

ಹೀಗೆ ಮತ್ತೆ ಮತ್ತೆ ಓದಲು ದೂಡುವ ವಿಭಿನ್ನ ಪದಸಂಯೋಜನೆ ಓದುಗರ ಎದೆಗಿಳಿಯದೇ ಇರಲಾರವು. ಮಿತ್ರ ಖಂಡೂ ಬಂಜಾರರು ಒಬ್ಬ ಕ್ರೀಯಾಶೀಲ ಶಿಕ್ಷಕರಷ್ಟೇ ಅಲ್ಲ ಒಬ್ಬ ಸೃಜನಶೀಲ ಬರಹಗಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಅಲ್ಲದೇ ಅವರ ಸಾಹಿತ್ಯ ಪಯಣದಲ್ಲಿ ಈ ಕೃತಿ ಒಂದು ಮೈಲಿಗಲ್ಲು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.ಎಲ್ಲರೂ ಒಮ್ಮೆ ಓದಲೇಬೇಕಾದ ಕವನ ಸಂಕಲನವಿದು ಓದಿ ಹಾರೈಸಿ ಪ್ರತಿ ಸಾಲಿನಲ್ಲಿ ಕಾಣುವ ಅವರ ಪರಿಶ್ರಮಕ್ಕೆ ಸಿಗುವ ಪ್ರತಿಫಲ ಇದೊಂದೆ.

ತುಂಬಾ ಅಭಿನಂದನೆಗಳು ತಮಗೆ
ತಮ್ಮ ಈ ಕೃತಿ ಓದುಗರ ಮನ ಈಗಾಗಲೇ ಗೆದ್ದು ಆಗಿದೆ. ಮುಂದೆ ಇಂಥ ಹತ್ತು ಹಲವು ಕೃತಿಗಳು ನಿಮ್ಮ ಲೇಖನಿಯಿಂದ ಹೊರಹೊಮ್ಮುತ್ತಾ ಇರಲಿ
ಓದಿ ಖುಷಿಪಟ್ಟು ಖುಷಿ ಹಂಚುವ ಭಾಗ್ಯ ನಮ್ಮದಾಗಲಿ…

ಲೇಖಕರು : ನರ್ಸಿಂಗ್ ಲಮಾಣಿ

~ ತಮ್ಮವ..
ನರ್ಸಿಂಗ್ ಲಮಾಣಿ
(ಗಂಗಾತನಯ)
ಉಪನ್ಯಾಸಕರು
ಗೋಕರ್ಣ
ಉತ್ತರಕನ್ನಡ ಜಿಲ್ಲೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version