ದಿನದ ಸುದ್ದಿ
ಜೂನಿಯರ್ ಅಮಿತಾಬ್ ಬಚ್ಚನ್ ನಿಧನ
ಸುದ್ದಿದಿನ ಡೆಸ್ಕ್ : ಜೂನಿಯರ್ ಅಮಿತಾಬ್ ಬಚ್ಚನ್, ಜನಪ್ರಿಯ ಕಿರುತೆರೆ ನಟ ಫಿರೋಜ್ ಖಾನ್ ಅವರು ಉತ್ತರ ಪ್ರದೇಶದ ಬದೌನ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು ‘ಭಾಬಿಜಿ ಘರ್ ಪರ್ ಹೈ!’, ‘ಜೀಜಾ ಜಿ ಛತ್ ಪರ್ ಹೈ’, ‘ಸಾಹೇಬ್ ಬೀಬಿ ಔರ್ ಬಾಸ್’, ‘ಹಪ್ಪು ಕಿ ಉಲ್ತಾನ್ ಪಲ್ತಾನ್’, ಮತ್ತು ‘ಶಕ್ತಿಮಾನ್’ ಚಿತ್ರಗಳಲ್ಲಿ ಅಭಿನಯಿಸಿದ್ದರು. ಫಿರೋಜ್ ಖಾನ್ ಅವರು ಅಮಿತಾಬ್ ಬಚ್ಚನ್ ಅವರ ಮಿಮಿಕ್ರಿಗೂ ಹೆಸರುವಾಸಿಯಾಗಿದ್ದರು.
ಗಾಯಕ ಅದ್ವಾನ್ ಸಾಮಿ ಅವರ ‘ಥೋಡಿ ಸಿ ತು ಲಿಫ್ಟ್ ಕರ ದೇ’ ಹಾಡಿನಲ್ಲಿ ಭಾಗವಾಗಿದ್ದರು. ಬಾಲಿವುಡ್ ಚಿತ್ರರಂಗ ಇವರಿಗೆ ತೀವ್ರ ಸಂತಾಪಗಳನ್ನು ಸೂಚಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243