ದಿನದ ಸುದ್ದಿ
ಭದ್ರಾವತಿ ಹೊಸ ಸೇತುವೆ ಮುಳುಗಡೆ | ನೋಡಲು ಹರಿದು ಬಂದ ಜನ ಸಾಗರ
ಸುದ್ದಿದಿನ ಡೆಸ್ಕ್ | ಭದ್ರಾವತಿಯಲ್ಲಿ ಭಾರೀ ಮಳೆಯಾಗುತ್ತಿರುವುದರ ಹಿನ್ನೆಲೆ, ಭದ್ರಾ ಜಲಾಶಯದಿಂದಲೂ ನೀರು ಬಿಡುಗಡೆಯಾಗುತ್ತಿದೆ. ಪರಿಣಾಮ ನಗರದ ಹೊಸ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಹಾಗಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಇನ್ನು ಮುಳುಗಿರುವ ಸೇತುವೆಯನ್ನು ನೋಡಲು ಮಳೆಯಲ್ಲಿಯೂ ಜನ ಸಾಗರ ಹರಿದು ಬರುತ್ತಿದೆ. ಪರಿಣಾಮ ಹಳೆಯ ಸೇತುವೆಯ ಮೇಲೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ.