ದಿನದ ಸುದ್ದಿ

ಭಾಗ್ಯಲಕ್ಷ್ಮಿ ಆರ್. ಸಿ ಅವರಿಗೆ ಪಿಎಚ್. ಡಿ ಪದವಿ

Published

on

ಸುದ್ದಿದಿನ ಡೆಸ್ಕ್ : ಸಂತ ಚಾರ್ಲ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ನ್ಯೂಟೌನ್, ಭದ್ರಾವತಿ. ಕನ್ನಡ ಉಪನ್ಯಾಸಕರಾದ ಭಾಗ್ಯಲಕ್ಷ್ಮಿ ಆರ್.ಸಿ ಅವರಿಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ 31ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಡಾಕ್ಟರ್ ಪದವಿ ಪಡೆದಿದ್ದಾರೆ.

ಭಾಗ್ಯಲಕ್ಷ್ಮಿ ಆರ್ ಸಿ ಅವರು ಎನ್.ಆರ್ ಪುರ ಪ್ರಥಮ ದರ್ಜೆ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಅಣ್ಣಪ್ಪ ಎನ್. ಇವರ ಮಾರ್ಗದರ್ಶನದಲ್ಲಿ ” ಕನ್ನಡ ವೈಚಾರಿಕ ಸಾಹಿತ್ಯದಲ್ಲಿ ಜಾತಿ ಮತ್ತು ಧರ್ಮವನ್ನು ಕುರಿತ ನೆಲೆಗಳು” ಎಂಬ ವಿಷಯದ ಮೇಲೆ ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಘೋಷಿಸಿದೆ. ಭಾಗ್ಯಲಕ್ಷ್ಮಿ ಆರ್.ಸಿ ಅವರು ಭದ್ರಾವತಿ ತಾಲೂಕು ಬೊಮ್ಮನಕಟ್ಟೆ ವಾಸಿಯಾದ ಚೆಲುವರಾಜ್ ಮತ್ತು ಕಾಳಮ್ಮ ದಂಪತಿಗಳ ಪುತ್ರಿಯಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version