ದಿನದ ಸುದ್ದಿ
ಫೇಸ್‌ಬುಕ್ ನಲ್ಲಿ ಬಿಜೆಪಿ ಪರ ಪ್ರಚಾರ : ಶಾಲಾ ಮುಖ್ಯೋಪದ್ಯಾಯ ಅಮಾನತು
ಸುದ್ದಿದಿನ,ಕಲಬುರಗಿ : ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಹಿನ್ನಲೆ ದೇವಲಗಾಣಗಾಪುರ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಯ ಅಮಾನತು ಗೊಂಡಿದ್ದಾರೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ಲಕ್ಷ್ಮಣ ಜೋಗುರು, ಅಮಾನತುಗೊಂಡ ಮುಖ್ಯೋಪಾಧ್ಯಯ. ವಾಟ್ಸಪ್‌ನಲ್ಲಿ ಬಿಜೆಪಿ ಪರ ಪ್ರಚಾರ ಮಾಡಿ, ಫೇಸ್‍ಬುಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲಿಸಿ ಫೋಟೊ ಅಪ್‌ಲೋಡ್ ಮಾಡಿದ್ದರು.
ಈ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿತ್ತು.ದೂರು ದಾಖಲಿಸಿಕೊಂಡು ಡಿಡಿಪಿಐ ಶಾಂತಗೌಡ ಪಾಟೀಲ್‌ರಿಂದ ಅಮಾನತು ಆದೇಶ ನೀಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401