ರಾಜಕೀಯ
ಬಿಜೆಪಿ ರಾಜ್ಯಾದ್ಯಕ್ಷ ಬದಲಾವಣೆ ಇಲ್ಲ : ಸಂಸದ ನಳಿನ್ ಕುಮಾರ್
ಸುದ್ದಿದಿನ,ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಸಂಬಂಧ ಅಮಿತ್ ಶಾ ಚರ್ಚೆ ವಿಚಾರ ಸದ್ಯಕ್ಕೆ ಯಡಿಯೂರಪ್ಪರೇ ಇದಾರೆ, ಚುನಾವಣೆಗಳು ಬರಲಿಕ್ಕಿದೆ ಅಂಥಹ ಯಾವುದೇ ಸಂಬಂಧ ಮತ್ತು ಸಂದರ್ಭಗಳು ಬಂದಿಲ್ಲ ಎಂದು ಮಂಗಳೂರಿನಲ್ಲಿ ದ.ಕ ಲೋಕಸಭಾ ಸಂಸದ ನಳಿನ್ ಕುಮಾರ್ ಹೇಳಿದ್ದಾರೆ.
ಹೀಗಾಗಿ ನಮ್ಮಲ್ಲಿ ಖಾಲಿ ಹುದ್ದೆಗಳಿಲ್ಲ, ಅವಶ್ಯಕತೆಗಳೂ ಇಲ್ಲ. ಅಲ್ಲದೇ ಹುದ್ದೆ ಬದಲಾವಣೆ ಚರ್ಚೆ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತದೆ. ಒಂದು ಘಂಟೆಗಳ ಕಾಲ ಅಮಿತ್ ಶಾ ಜೊತೆ ಕುಶಲೋಪರಿಯಷ್ಟೇ ಮಾತನಾಡಿದ್ದೇನೆ. ಕರಾವಳಿ ರಾಜಕೀಯದ ಬಗ್ಗೆ ನಮಗಿಂತ ಹೆಚ್ಚು ಅಮಿತ್ ಶಾರಿಗೆ ಮಾಹಿತಿಯಿದೆ. ಹೀಗಾಗಿ ದ.ಕ ಜಿಲ್ಲೆಗಿಂತ ಹೆಚ್ಚು ಬಾಕಿ ಉಳಿದ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದೆ. ಸಂಘದ ಬೈಠಕ್ ನಲ್ಲಿ ರಾಷ್ಟ್ರೀಯ ಅಧ್ಯಕ್ಷರು ಭಾಗವಹಿಸೋದು ಸಹಜ ಪ್ರಕ್ರಿಯೆ ಎಂದರು.
ಕೇರಳದಲ್ಲಿ ಶಬರಿಮಲೆ ಹೋರಾಟ ಮುಂದುವರೆಸುವ ವಿಚಾರ ಈಗಾಗಲೇ ಬಿಜೆಪಿ, ಸಂಘಪರಿವಾರ ಭಾಗಿಯಾಗಿ ಹೋರಾಟ ನಡೆಯುತ್ತಿದೆ. ಕೇರಳ ಮುಖ್ಯಮಂತ್ರಿ ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ಕೇರಳ ಬಿಜೆಪಿ ನಿರ್ಧರಿಸುತ್ತೆ ಎಂದರು.