ರಾಜಕೀಯ
‘ತಲಾಖ್ ತಲಾಖ್ ತಲಾಖ್’ ರೀತಿಯಲ್ಲಿ ಕುಮಾರಸ್ವಾಮಿಗೆ ಕಾಂಗ್ರೆಸ್ ಶೀಘ್ರ ತಲಾಖ್ ಕೊಡಲಿದೆ : ಆರ್.ಅಶೋಕ್
ಸುದ್ದಿದಿನ ಡೆಸ್ಕ್ : ಬಿಜೆಪಿ ಶಾಸಕರ ಔತಣಕೂಟದಲ್ಲಿ ರಮೇಶ ಜಾರಕಿಹೊಳಿ ಭಾಗಿ ವಿಚಾರ, ಬೆಳಗಾವಿಯಲ್ಲಿ ಇರುವ ಕಾರಣ ಎಲ್ಲರೂ ಬಂದಿದ್ದಾರೆ. ರಮೇಶ ಜಾರಕಿಹೊಳಿ ಮತ್ತು ಡಿ.ಕೆ. ಶಿವಕುಮಾರ್ ಗೆ ಎಣ್ಣೆ ಸೀಗೇಕಾಯಿ ಸಂಬಂಧ ಅಂತ ಎಲ್ಲರಿಗೂ ಗೊತ್ತಿದೆ. ಬೆಳಗಾವಿಯನ್ನು ಎರಡು ಭಾಗ ಮಾಡಿದ ಡಿಕೆಶಿ ಔತಣಕೂಟಕ್ಕೆ ಜಾರಕಿಹೊಳಿ ಹೋಗಲು ಇಷ್ಟ ಇಲ್ಲದೇ ಹೋಗಿರಲಿಕ್ಕಿಲ್ಲ ಎಂದು ಆರ್. ಅಶೋಕ್ ಹೇಳಿದರು.
ನಿನ್ನೆ ಕವಟಗಿಮಠ ಆಯೋಜಿಸಿದ ಔತಣಕೂಟಕ್ಕೆ ಜಾರಕಿಹೊಳಿ ಬಂದಿದ್ದು, ಬೇರೆ ಏನೂ ಇಲ್ಲ. ರಮೇಶ ಜಾರಕಿಹೊಳಿ ತೀರ್ಮಾನದ ಬಗ್ಗೆ ನಮಗೆ ಗೊತ್ತಿಲ್ಲ , ಯಾವ ಕಾರಣಕ್ಕೆ ಭಾಗವಹಿಸಿದರೋ ಗೊತ್ತಿಲ್ಲ, ಪ್ರೀತಿ ವಿಶ್ವಾಸದಿಂದ ಬಂದಿರಬಹುದು. ಈಗಾಗಲೇ ಒಬ್ಬ ಸಿಎಂ ಇರೋವಾಗ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂದಿದ್ದಾರೆ. ತಲಾಖ್ ತಲಾಖ್ ತಲಾಖ್ ರೀತಿಯಲ್ಲಿ ಕುಮಾರಸ್ವಾಮಿಗೆ ಕಾಂಗ್ರೆಸ್ ಶೀಘ್ರ ತಲಾಖ್ ಕೊಡಲಿದೆ. ಸೋಡಾ ಚೀಟಿ ಪಡೆಯಲು ಕುಮಾರಸ್ವಾಮಿ ರೆಡಿಯಾಗಿರಲಿ ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಆರ್. ಅಶೋಕ್ ಎಚ್ವರಿಕೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401