ದಿನದ ಸುದ್ದಿ
ನಾಳೆ ಸಾಹಿತಿ ಬಿ. ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿ ಬಿಡುಗಡೆ
ಸುದ್ದಿದಿನ, ದಾವಣಗೆರೆ : ಸಾಹಿತಿ ಬಿ. ಶ್ರೀನಿವಾಸ ಅವರ ಸಣ್ಣ ಕಥೆಗಳ (ನ್ಯಾನೋ) ಸಂಕಲನ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿ ಬಿಡುಗಡೆಯ ಕಾರ್ಯಕ್ರಮವು ನಗರದ ಆರ್ ಎಲ್ ಲಾ ಕಾಲೇಜಿನ ಸಭಾಂಗಣದಲ್ಲಿ ನಾಳೆ ( ಜುಲೈ-23) ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಚಿಂತಕ ಕೆ. ಪಿ. ಸುರೇಶ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪಿ. ಭಾರತಿದೇವಿ ಅವರು ಕೃತಿಯ ಕುರಿತು ಮಾತನಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ ತಾಳ್ಯ ಅವರು ವಹಿಸಲಿದ್ದಾರೆ.
ಮುಖ್ಯ ಅಥಿತಿಯಾಗಿ ಎಂ.ಜಿ. ಈಶ್ವರಪ್ಪ ಹಾಗೂ ಕತೆಯ ಓದಿನಲ್ಲಿ ವಿ. ಹರಿನಾಥ ಬಾಬು, ಶಿವಕುಮಾರ ಕಂಪ್ಲಿ, ಪೂಜಾ ಸಿಂಘೆ ಇವರು ಪಾಲ್ಗೊಳ್ಳಲಿದ್ದಾರೆ.
ಕೊಪ್ಪಳದ ತಳಮಳ ಪ್ರಕಾಶನದಿಂದ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿ ಪ್ರಕಟವಾಗಿದೆ. ಕಾರ್ಯಕ್ರಮದ ಸಂಯೋಜನೆ ನಿರ್ವಹಣೆಯನ್ನು ಸನಾವುಲ್ಲ ನವಿಲೇಹಾಳು ಅವರು ವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243