/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಅಂತರಂಗ

ದಾವಣಗೆರೆ | ನ.16 ರಂದು ‘ಬದುಕಿನ ಬಯಲು’ ಕೃತಿ ಲೋಕಾರ್ಪಣೆ

Published

on

ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ , ಜನತಾವಾಣಿ ದಿನಪತ್ರಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ : 16/11/2019 ರ ಶನಿವಾರ ಬೆಳಗ್ಗೆ ದಾವಣಗೆರೆ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿರುವ 64ನೇ ಕನ್ನಡ ರಾಜ್ಯೋತ್ಸವ, ರಜತ ಮಹೋತ್ಸವ, ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಾವಣಗೆರೆ ನಗರದ ಕವಿ ಗಂಗಾಧರ ಬಿ ಎಲ್ ನಿಟ್ಟೂರ್ ಅವರ ಬದುಕಿನ ಬಯಲು ಕೃತಿ ಲೋಕಾರ್ಪಣೆಯಾಗಲಿದೆ.

ತಮ್ಮ ವಿಶಿಷ್ಠ ಬರವಣಿಗೆ ಶೈಲಿಯಿಂದ ಗುರುತಿಸಿಕೊಂಡಿರುವ ಪ್ರತಿಭಾವಂತ ಯುವ ಸಾಹಿತಿಯಾದ ಗಂಗಾಧರ ಬಿ ಎಲ್ ನಿಟ್ಟೂರ್ ಅವರು ಸುಮಾರು 20 ವರ್ಷಗಳಿಂದ ಜನಮಿಡಿತ ದಿನಪತ್ರಿಕೆ, ಕನ್ನಡ ಭಾರತಿ, ಜನತಾಬಳಗ, ಬೆಳಕು ಸೆಳಕು ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಬರಹಗಾರರು, ಪತ್ರಕರ್ತರು ಹಾಗೂ ಸುದ್ದಿ ದಿನ ಆನ್ ಲೈನ್ ಪತ್ರಿಕೆಯ ಅಂಕಣಕಾರರಾಗಿ ಸಾವಿರಾರು ಸಾಮಾಜಿಕ ಕಳಕಳಿ ಮತ್ತು ಜನ ಜಾಗೃತಿ ಲೇಖನಗಳ ಕೊಡುಗೆ ನೀಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್, ತಿಂಗಳ ಅಂಗಳ ಸಾಹಿತ್ಯ ಬಳಗ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಮೂಲಕ ಅನೇಕ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಸಾಹಿತ್ಯ ಪರಿಚಾರಕರಾಗಿ ಗುರುತಿಸಿಕೊಂಡಿದ್ದಾರೆ.

ದಾವಣಗೆರೆ ಸ್ಥಳೀಯ ವಾಹಿನಿಗಳಾದ ಸೃಷ್ಟಿ, ಕೆ. ಎಫ್ ಚಾನಲ್ ಹಾಗೂ ಪ್ರಸ್ತುತ ವಿ. ಒನ್ ವಾಹಿನಿಯ ಕಾವ್ಯಧಾರೆ ಕಾರ್ಯಕ್ರಮದ ಸಂಘಟಕರು ಮತ್ತು ಸಂದರ್ಶಕರಾಗಿ ದಾವಣಗೆರೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಸಾವಿರಾರು ಪ್ರತಿಭಾವಂತರ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಿಕೊಡುವ ಜತೆ ತೆರೆ ಮರೆಯ ಸಾಧಕರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಪ್ರೇರಕರಾಗಿದ್ದಾರೆ. ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಕರಾಗಿ ತಮ್ಮದೇ ಆದ ವಿಶೇಷ ಧ್ವನಿಯಿಂದ ಜನಮಾನಸದಲ್ಲಿ ವಿಶಿಷ್ಠ ಛಾಪು ಮೂಡಿಸಿದ್ದಾರೆ.

ಇದೀಗ ತಮ್ಮ ಚೊಚ್ಚಲ ಕವನ ಸಂಕಲನ ಬದುಕಿನ ಬಯಲು ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸುತ್ತಿದ್ದಾರೆ. ವಿಭಿನ್ನ ವಿಷಯಗಳ ಮೇಲೆ ಗಂಭೀರ ಚಿಂತನೆಯೊಂದಿಗೆ ಕಾವ್ಯ ಹೆಣದಿರುವ ನಿಟ್ಟೂರ್ ಅವರ ಈ ಕೃತಿಯಲ್ಲಿ ಒಟ್ಟು 72 ಕವಿತೆಗಳಿದ್ದು, ಅತಿ ಹೆಚ್ಚು ಕವಿತೆಗಳು ಬದುಕಿನ ಒಳ ಹೊರಹುಗಳ ಅನನ್ಯ ಅನುಭಾವವನ್ನು ಹೊರ ಸೂಸುತ್ತವೆ.

ಕೃತಿ ಲೋಕಾರ್ಪಣೆಯ ಈ ಸಂದರ್ಭದಲ್ಲಿ ದಾವಣಗೆರೆಯ ಸಾಹಿತ್ಯಾಸಕ್ತರು, ಕವಿಮನಗಳು, ಸ್ನೇಹಿತರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿ ಶ್ರೀಯುತರ ಇನ್ನಷ್ಟು ಸಾಹಿತ್ಯ ಕೃಷಿಗೆ ಉತ್ಸಾಹ ತುಂಬುವಂತಾಗಲಿ.

ಪರಿಚಯ ಲೇಖನ : ಪಾಪು ಗುರು, ಕವಿಗಳು, ದಾವಣಗೆರೆ ,
ಮೊ. ಸಂ : 9844187574, 8073591388

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version