ಭಾವ ಭೈರಾಗಿ
ಪುಸ್ತಕ ವಿಮರ್ಶೆ | ಮೋಹದ ಮೋಡಗಳು
- ಸಿಂಪಲ್ ಸಿಂಚು
ಷಕೀಬ್ ಎಸ್. ಕಣದ್ಮನೆ ನವಿಲೇಹಾಳ್, ಆತ್ಮೀಯ ಸಹೋದರ ಇತ್ತೀಚಿನ ಚಿತ್ರದುರ್ಗ ಕರುನಾಡ ಹಣತೆ ಕವಿ ಬಳಗದ ಸಮ್ಮೇಳನದಲ್ಲಿ ಪರಿಚಿತರಾಗಿ, ಕಡಿಮೆ ಸಮಯದಲ್ಲಿ ಮಮತೆಯಿಂದ ಮನಗೆದ್ದ ಸಹೋದರ ಷಕೀಬ್ ಅಣ್ಣ. ಇವರ ಸರಳತೆ ಎಂತಹ ವ್ಯಕ್ತಿಗೂ ಮಾದರಿ. ತಲೆ ಹೋಗುವ ಸಮಸ್ಯೆಯಿದ್ದರೂ ಹೂ ನಗೆ ಚೆಲ್ಲುವ ಶ್ರಮಜೀವಿ.
ವಿದ್ಯಾರ್ಥಿ ಜೀವನದ ಜೊತೆಜೊತೆಗೆ ರೈತನ ಪಟ್ಟ ಹೊತ್ತಿರುವ ಯಾವಾಗಲೂ ತೋಟ -ಜಮೀನು ಕೆಲಸಗಳಲ್ಲಿ ತೊಡಗಿ ಭೂಮಿಯ ಸ್ವರ್ಗವ ಕಾಣುವ, ವ್ಯಕ್ತಿತ್ವ ಒಂದೆಡೆಯಾದರೆ, ದೇಶಭಕ್ತಿ , ಪ್ರೇಮಭಕ್ತಿ , ಪ್ರಕೃತಿ ಆರಾಧನೆ, ಮೂರನ್ನು ಒಟ್ಟೊಟ್ಟಿಗೆ ಮೋಹದ ಮೋಡಗಳು ಕವನಸಂಕಲನದಲ್ಲಿ ಮಜಬೂತಾಗಿ ವರ್ಣಿಸಿರುವುದು ವಿಶೇಷವೇ ಸರಿ.
ತಮ್ಮ ತವರೂರಾದ ನವಿಲುರೂನಿಂದ ಹಿಡಿದು, ಭಾರತ ದೇಶದ ಬಗ್ಗೆಯೂ ಕವಿತೆಗಳನ್ನು ರಚಿಸಿ ದೇಶಪ್ರೇಮ ಮೆರೆದಿದ್ದಾರೆ. ತನ್ನ ಪ್ರೇಯಸಿಯನ್ನು ಕವಿತೆಗಳ ಮೂಲಕ ಕಾಡಿ, ಬೇಡಿ, ಆರಾಧಿಸಿ, ಹೊಟ್ಟೆ ಉರಿಸಿಕೊಂಡಿರುವ ಪ್ರೇಮ ಲಹರಿ ಒಂದೆಡೆ ಅದ್ಭುತವಾಗಿ ಮೂಡಿ ಬಂದಿದೆ.
ಜೊತೆಗೆ ಪ್ರಕೃತಿಯ ಮಡಿಲಿನಲ್ಲಿ ಜೀವನ ನಡೆಸುವ ಇವರು ತಮ್ಮ ಕವನ ಸಂಕಲನದಲ್ಲಿ ಪ್ರಕೃತಿಯ ವಿವಿಧ ರೀತಿಯ ಮಜಲುಗಳನ್ನು ತುಂಬಾ ಮೋಹಕವಾಗಿ ವರ್ಣಿಸಿದ್ದಾರೆ ಒಂದೆರಡು ಕವಿತೆಗಳಾದ, ಹೀಗೇಕೆ?, ಕಣ್ಣೀರ ಮಳೆ ನಾನು ತುಂಬಾ ಭಾವುಕಳಾದ ಕವಿತೆಗಳು. ತಮ್ಮ ತಂಗಿಯರಿಗೆ ಕವಿತೆ ಬರೆದು ಅಣ್ಣನ ವಾಸ್ತಲ್ಯವನ್ನು ಮೆರೆದಿರುವುದು ಬಾಂಧವ್ಯಗಳಿಗೆ ಸಂಬಂಧಗಳಿಗೆ ಇವರು ನೀಡುವ ಪ್ರಾಮುಖ್ಯತೆಯನ್ನು ಕಲಿಸಿಕೊಡುತ್ತವೆ.
ಭಾರತದ ಬೆನ್ನೆಲುಬು ರೈತ, ಮತ್ತು ಯೋಧರಿಗೆ ನೈಜ್ಯತೆಯ ವಂದನಾರ್ಪಣೆ ಸಲ್ಲಿಸಿದ್ದಾರೆ. “ಈ ಪುಸ್ತಕದ ಪ್ರತಿ ಪುಟಗಳ ತೆನೆ ಹಿಡಿದ ಕೈಗಳು ಚಿಹ್ನೆಯೂ” ಕವಿಯ ರೈತನ ಮೇಲಿನ ಅಭಿಮಾನ ತಿಳಿಸಿಕೊಡುತ್ತದೆ.
ಮೊಟ್ಟಮೊದಲ ಪ್ರಯತ್ನವೇ ರಂಗುರಂಗಾಗಿದ್ದರು, ಮೋಹದ ಮೋಡಗಳಂತೆ ತಿಳಿಯಾಗಿರುವಂತೆ ಬಾಸವಾಗುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಅತಿ ಹೆಚ್ಚು ವಿಮರ್ಶೆ, ಕಥೆ, ಕವನ, ಕಾದಂಬರಿ ನಿಮ್ಮಿಂದ ಕರುನಾಡಿಗೆ ಕೊಡುಗೆ ಆಗಲಿ ಕನ್ನಡ ಲೋಕದ ಜ್ಞಾನಪೀಠಗಳ ಹೃದಯದ ಸಾಲಿನಲ್ಲಿ ನೀವು ಸೇರಿ ಶುಭವಾಗಲಿ ಎಂದು ಆಶಿಸುವ ನಿಮ್ಮ ಪ್ರೀತಿಯ ಸಹೋದರಿ ಸಿಂಪಲ್ ಸಿಂಚು.
ಸುದ್ದಿದಿನ.ಕಾಂ|ವಾಟ್ಸಾಪ್|9980346243