ದಿನದ ಸುದ್ದಿ

ಮಾರ್ಚ್ 2 ರಂದು ಕೆ.ಶ್ರೀಧರ್ ಅವರ ನಾಲ್ಕು ಪುಸ್ತಕಗಳ ಬಿಡುಗಡೆ

Published

on

ಸುದ್ದಿದಿನಡೆಸ್ಕ್:ಕೆ.ಶ್ರೀಧರ್(ಕೆ.ಸಿರಿ) ರವರ ನಾಲ್ಕು ಪುಸ್ತಕಗಳು ಕಾವ್ಯ ಸ್ಪಂದನಾ ಪಬ್ಲಿಕೇಷನ್ ಬೆಂಗಳೂರು ಪ್ರಕಾಶನದಲ್ಲಿ ಮಾರ್ಚ್ 2 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಲೋಕಾರ್ಪಣೆಗೊಳ್ಳಲಿವೆ.

‘ದೊಡ್ಡ ಸಂಪಿಗೆ’- ದೊಡ್ಡ ಸಂಪಿಗೆ ಕೃತಿಯು ಚಾಮರಾಜನಗರದ ಭಾಷೆಯಲ್ಲಿ ಮೂಡಿ ಬಂದಿದ್ದು ಒಟ್ಟು 23 ಕಥೆಗಳಿದ್ದು ಚಾಮರಾಜನಗರದ ಕಾಡು,ಮೇಡು,ಬಿಳಿಗಿರಿರಂಗನ ಬೆಟ್ಟ,ಕೆ.ಗುಡಿ ಮತ್ತು ಬೇಡಗುಳಿ ಪ್ರದೇಶದ ಸುತ್ತ ಓದುಗರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಕಥಾಸಂಕನವಾಗಿದೆ ಇದರ ಬೆಲೆ 150/- ರೂಪಾಯಿ.

‘ಗೌರಿ ಮಕ್ಕಳು’- ಬಳ್ಳಾರಿಯ ವಿಭಜಿತ ವಿಜಯನಗರ ಜಿಲ್ಲೆಯ ಗ್ರಾಮೀಣ ಬದುಕಿನ ಅನೇಕ ಸ್ವಾರಸ್ಯಕರ ಅಂಶಗಳನ್ನೊಳಗೊಂಡ ಹಳ್ಳಿ ಬದುಕಿನ ಚಿತ್ರಣ ಕಣ್ಣಿಗೆ ಕಟ್ಟುವಂತಿವೆ ಗೌರಿ ಮಕ್ಕಳ 28 ಕಥೆಗಳು ಈ ಕೃತಿಗೆ ನಾಡಿನ ಹೆಸರಾಂತ ಸಾಹಿತಿಗಳಾದ ಕುಂ.ವೀ ರವರು ಬೆನ್ನುಡಿ ಬರೆದಿದ್ದು ಇದರ ಬೆಲೆ 160/- ರೂಪಾಯಿಗಳಾಗಿವೆ.

‘ಒಡಪಾಡು’- ಒಡಪಾಡು ಕೃತಿ ಹೆಸರಾಂತ ಸಾಹಿತಿಗಳಾದ ಸ್ವಾಮಿ ಪೊನ್ನಾಚಿರವರೇ ಹೇಳುವಂತೆ ಇಲ್ಲಿನ ಕತೆಗಳು ಎದೆಯನ್ನು ಹೊಕ್ಕು ಹೃದಯವನ್ನು ಗೆಲ್ಲುತ್ತವೆ, ಈ ಕೃತಿ ಮಾತನಾಡುವುದು ಮಾತಿಲ್ಲದವರ ಬಗ್ಗೆ ಇಲ್ಲಿನ 25 ಕತೆಗಳು ಮೊದಲ ಮಳೆ ಬಿದ್ದು ಘಮಗುಡುವ ಮಣ್ಣಿನ ಘಮಲಿನಂತೆಯೇ ಮೂಗಿಗಡರುತ್ತವೆ ಇದರ ಬೆಲೆ 140/- ರೂಪಾಯಿಗಳು.

‘ಪಂಚಮುಖಿ’- ನಾಡಿನ ಹೆಸರಾಂತ ಸಾಹಿತಿಗಳು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ ದೊಡ್ಡರಂಗೇಗೌಡರು ಹೇಳುವಂತೆ ಪಂಚಮುಖಿಯಲ್ಲಿನ 87 ಕವಿತೆಗಳಿದ್ದು ಬಹುತೇಕ ಕವಿತೆಗಳು ಇಷ್ಟವಾಗುತ್ತವೆ, ಮೆಚ್ಚುಗೆಗೆ ಅರ್ಹವಾದ ಪ್ರೇಮ ಕವನಗಳ ಸಂಕಲನ ಎಂದು ಬಣ್ಣಿಸಿದ್ದು ಇದರ ಬೆಲೆ 140/- ರೂಪಾಯಿಗಳಾಗಿವೆ.

ಆಸಕ್ತರು ಪುಸ್ತಕ ಖರೀದಿಸಲು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು 88614 95610 ಒಟ್ಟು ಬೆಲೆ-590 ಅಂಚೆ ವೆಚ್ಚ ಉಚಿತ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version