ದಿನದ ಸುದ್ದಿ
ಬ್ರೇಕಿಂಗ್ | ಕೇರಳದ ನೆರವಿಗೆ ತೆರಳುವ ಜನರಿಗೆ ಉಚಿತ ವಿಮಾನ ಟಿಕೆಟ್ !
ಸುದ್ದಿದಿನ ಡೆಸ್ಕ್ | ಕೇರಳದ ಸಂತ್ರಸ್ತರ ನೆರವಿಗೆ ಇಡೀ ದೇಶ ಮುಂದಾಗಿದೆ. ಅಷ್ಟೇ ಅಲ್ಲ ವಿದೇಶಗಳು ನೆರವಿನ ಹಸ್ತ ಚಾಚಿವೆ. ಶತಮಾನದ ಮಳೆಗೆ ತತ್ತರಿಸಿ ಹೋದ ಕೇರಳದ ಸಂತ್ರಸ್ತರ ನೆರವಿಗೆ ಇಡೀ ಮನುಕುಲ ಮನಸ್ಸು ಮಾಡಿದೆ.
ಈಗ ಏರ್ ಲೈನ್ಸ್ ಕೂಡ ಕೇರಳದ ಸಂತ್ರಸ್ತರ ನೆರವಿಗೆ ಮುಂದಾಗಿದ್ದು, ವಿಶಿಷ್ಟ ರೀತಿಯ ಸಹಾಯ ಘೋಷಣೆ ಮಾಡಿದೆ. ನೆರೆ ಪೀಡಿತ ಜನರಿಗೆ ನೆರವಾಗಲು ಕೇರಳಕ್ಕೆ ಹೋಗಬಯಸುವವರಿಗೆ ಈ ಏರ್ ಲೈನ್ಸ್ ಉಚಿತ ಟಿಕೆಟ್ ನೀಡಲು ನಿರ್ಧರಿಸಿದೆ.
ವೈದ್ಯರು, ನರ್ಸ್ ಗಳು, ವಿಕೋಪ ನಿರ್ವಹಣೆ ತಜ್ಞರು, ತರಬೇತಿ ಪಡೆದ ಸ್ವಯಂಸೇವಕರು, ಗುರುತಿಸಲ್ಪಟ್ಟ ಸಂಸ್ಥೆಗಳು, ಪರಿಹಾರ ಪ್ರತಿನಿಧಿಗಳು ಈ ಸೌಲಭ್ಯ ಉಪಯೋಗಿಸಿಕೊಂಡು ಕಷ್ಟದಲ್ಲಿ ಇರುವ ಕೇರಳ ಜನರಿಗೆ ನೆರವು ನೀಡಬಹುದು.
keralarelief@airvistara.com ಗೆ ವಿನಂತಿ ಪತ್ರ ಬರೆದು ಹೋಗುವ ಮತ್ತು ಮರಳಿ ಬರುವ ಟಿಕೆಟ್ ಪಡೆಯಬಹುದು ಎಂದು ವರದಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401