ದಿನದ ಸುದ್ದಿ

ಗುಜರಾತ್ ಪ್ರವಾಸದಲ್ಲಿ ಬ್ರಿಟನ್ ಪ್ರಧಾನಿ : ವಿವಿಧ ಹೂಡಿಕೆಗಳ ಘೋಷಣೆ ನಿರೀಕ್ಷೆ

Published

on

ಸುದ್ದಿದಿನ, ಗುಜರಾತ್ : ಗುಜರಾತ್ ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಹೂಡಿಕೆ ಸಹಯೋಗವನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಪ್ರಕಟಿಸುವ ನಿರೀಕ್ಷೆ ಇದೆ.

ಗುಜರಾತ್ ನ ಗಾಂಧಿನಗರದಲ್ಲಿರುವ ಗುಜರಾತ್ ಜೈವಿಕ ತಂತ್ರಜ್ಞಾನ ವಿಶ್ವವಿದ್ಯಾಲಯಕ್ಕೆ ಮತ್ತು ಜೆಸಿಪಿ ಕಂಪೆನಿಯ ಘಟಕಕ್ಕೆ ಅಲ್ಲಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಬ್ರಿಟನ್ ಪ್ರಧಾನಿ ಭೇಟಿ ನೀಡಿದರು.

ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ಗುಜರಾತ್ ಜೈವಿಕ ವಿಶ್ವವಿದ್ಯಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನು ಗುಜರಾತ್ ನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಯುನೈಟೆಡ್ ಕಿಂಗ್ಡಮ್ ನ ಎಡಿನ್ಬರ್ಗ್ ವಿಶ್ವವಿದ್ಯಾಲಯ ಜಂಟಿಯಾಗಿ ನಿರ್ಮಿಸುತ್ತಿವೆ.

ಅಹಮದಾಬಾದ್ ನಲ್ಲಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಅವರೊಂದಿಗೂ ಜಾನ್ಸನ್ ಮಾತುಕತೆ ನಡೆಸಿದರು. ಸುಸ್ಥಿರ ಹವಾಮಾನಕ್ಕಾಗಿ ನವೀಕರಿಸಬಹುದಾದ ಇಂಧನಕ್ಕೆ ಬೆಂಬಲ ನೀಡಲು ಬದ್ಧ ಎಂದು ಅದಾನಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಸಾಬರಮತಿ ಆಶ್ರಮಕ್ಕೂ ಭೇಟಿ ನೀಡಿದ ಬ್ರಿಟನ್ ಪ್ರಧಾನಿ ರಾಷ್ಟ್ರಪಿತಾ ಮಹಾತ್ಮಾ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದರು. ಗಾಂಧಿನಗರದ ಅಕ್ಷರಧಾಮಕ್ಕೂ ಅವರು ಭೇಟಿ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version