ದಿನದ ಸುದ್ದಿ
ಡಿಕೆ ಸುರೇಶ್ ಹೇಳಿಕೆಗೆ ಬಿಎಸ್.ವೈಗೆ ಕಿಡಿ
ಸುದ್ದಿದಿನ ಡೆಸ್ಕ್: ಆದಾಯ ತೆರಿಗೆ ಇಲಾಖೆಗೆ ಬಿಎಸ್.ವೈ ಪತ್ರ ಬರೆದಿರುವುದು ನಕಲಿ ಆಗಿದ್ದರೆ ತನಿಖೆ ಒತ್ತಾಯಿಸಲಿ ಎಂಬ ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ. ಯಾವನ್ರಿ ಅವನು ಸುರೇಶ್. ನನ್ಯಾಕೆ ಅವನಿಗೆ ಉತ್ತರ ಕೊಡಲಿ ಎಂದು ಏಕವಚನದಲ್ಲಿ ಮಾತನಾಡಿದ್ದಾರೆ.
https://suddidina.com/daily-news/bharat-band-is-strategy-of-coalition-govt/
ಇದು ದುರುದ್ದೇಶದಿಂದ ಕೂಡಿರುವ ಪತ್ರ. ನಾನು ಆ ಪತ್ರವನ್ನು ಬರೆದಿಲ್ಲ. ಅವನೇ ಇಷ್ಟೆಲ್ಲಾ ಕೆಲಸ ಮಾಡಿರೋದು. ೨೦೧೭ರ ಜನವರಿಯಲ್ಲಿ ಬರೆದ ಪತ್ರವಾಗಿದ್ದು, ಈಗ ಅದನ್ನಿಟ್ಟು ಕೊಂಡು ಮಾತಾಡುತ್ತಿದ್ದಾರೆ. ಹಿಂದೊಮ್ಮೆ ಹೀಗೆ ಅವರು ನಕಲಿ ಪತ್ರ ಮಾಡಿ ಬಿಡುಗಡೆ ಮಾಡಿದ್ದರು. ಅದು. ಸುರೇಶ್ ಚಾಳಿ ಇಂಥ ಸುಳ್ಳು ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅರೋಪಿಸಿದ್ದಾರೆ.