ರಾಜಕೀಯ
ಲೋಕ ಸಭೆ ಉಪ ಚುನಾವಣೆ ಮುಗಿವವರೆಗೂ ವಿಧಾನ ಸೌಧಕ್ಕೆ ಬೀಗ ಹಾಕಿ : ಬಿ.ಎಸ್.ವೈ ಆಕ್ರೋಶ
ಸುದ್ದಿದಿನ,ಶಿವಮೊಗ್ಗ : ಹಣ ಬಲ, ಹೆಂಡದ ಬಲ, ಜಾತಿಬಲ, ತೋಳ್ಬಲದಿಂದ ಚುನಾವಣೆಗೆ ಇಳಿದವರಿಗೆ ಈ ಸಭೆ ಉತ್ತರ ನೀಡಿದೆ.ಚುನಾವಣೆಗೆ ಸ್ಪರ್ಧಿಸಿದವರು ಹಿಂದೆ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಎಂಬುದನ್ನು ನೋಡಿಕೊಂಡು ಮತ ಚಲಾಯಿಸಿ ಎಂದು ಶಿವಮೊಗ್ಗ ತಾಲೂಕು ಆಯನೂರಿನ ಸಮಾವೇಶದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಕೆರೆ ನೀಡಿದರು.
ನಂತರ ಮಾತನಾಡಿದ ಅವರು, ಕಳೆದ ಐದು ತಿಂಗಳಲ್ಲಿ ನೂರು ಜನರಿಗೆ ಭಾಗ್ಯ ಲಕ್ಷ್ಮೀ ಬಾಂಡ್ ನೀಡಿಲ್ಲ. ಇದು ನಿಮಗೆ ಇರುವ ಬಡವರ ಪರ ಕಾಳಜಿ ತೋರಿಸುತ್ತದೆ. ಯಾವ ಮುಖ ಇಟ್ಟುಕೊಂಡು ಮುಖ್ಯಮಂತ್ರಿ ಬಂದು ಇಲ್ಲಿ ಮತ ಕೇಳುತ್ತಾರೆ. ಬಡವರ ಶವ ಸಂಸ್ಕಾರಕ್ಕೆ ನಾನು ಅಧಿಕಾರದಲ್ಲಿದ್ದಾಗ ಹಣ ನೀಡುವ ಯೋಜನೆ ರೂಪಿಸಿದ್ದೆ ಆದರೆ ಈಗ ಮುಖ್ಯಮಂತ್ರಿ ಆ ಯೋಜನೆಯ ಹಣವನ್ನೂ ಸಾಲಮನ್ನಾಗೆ ಬಳಸಿಕೊಂಡಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಸರ್ಕಾರ ದಿವಾಳಿಯಾಗಿದೆ ಎಂದು ಕಿಡಿಕಾರಿದರು.
ಉಪ ಚುನಾವಣೆ ಮುಗಿಯುವವರೆಗೆ ವಿಧಾನಸೌಧದ ಬಾಗಿಲು ಹಾಕಿಬಿಡಿ.ಬಳ್ಳಾರಿ ಪ್ರಚಾರಕ್ಕೆ 60 ಮಂದಿ ಹೋಗುತ್ತಾರಂತೆ. ಶಿವಮೊಗ್ಗಕ್ಕೆ ಇನ್ನೆಷ್ಟು ಜನ ಬರುತ್ತಾರೋ ಗೊತ್ತಿಲ್ಲ. ಹೀಗಾಗಿ ವಿಧಾನಸೌಧಕ್ಕೆ ಯಾರೂ ಹೋಗಲ್ಲ. ಹಾಗಾಗಿ ಬಾಗಿಲು ಹಾಕಿಬಿಡಿ. ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ಕಾಂಗ್ರೆಸ್ ವರಿಷ್ಟ ರಾಹುಲ್ ಗಾಂಧಿ ಬಾಯಿ ಮುಚ್ಚಿಸಬಹುದು. ಈ ಸರ್ಕಾರ ಯಾವಾಗ ನೆಗೆದುಬಿದ್ದು ಹೋಗುತ್ತದೆಯೋ ಗೊತ್ತಿಲ್ಲ.ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಒಬ್ಬರ ಮುಖ ಒಬ್ಬರುನೋಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401