ಅಂತರಂಗ
ಶೇಕ್ಸ್ಪಿಯರ್, ಬುದ್ಧ ನೆನಪಾಗುತ್ತಿದ್ದಾರೆ
ಇಲ್ಲಿ ಮುಖ್ಯ ಪ್ರಶ್ನೆಯೆಂದರೆ ಪ್ರಜಾಪ್ರಭುತ್ವದ ಆಧಾರವು ಯಾವುದಾಗಿರಬೇಕು? ಸೀಸರ್ನ ವಿರುದ್ಧ ನಿಂತ ಒಳಸಂಚುಗಾರರು ನಂಬಿದ್ದೇನೆಂದರೆ ನಾಯಕನ ಆರಾಧನೆಯು ಪ್ರಜಾಪ್ರಭುತ್ವದ ವಿನಾಶದ ಕಾರಣವಾಗಬಲ್ಲದು. ಆದರೆಅವರು ಮಾಡುವಕೊಲೆಯೂ ಪ್ರಜಾಪ್ರಭುತ್ವದ ವಿನಾಶವೆಂಬುದು ಅವರಿಗೆ ತಿಳಿದಿಲ್ಲ.
ವ್ಯಂಗ್ಯವೇನೆಂದರೆ ಮಾರ್ಕ್ಆ್ಯಂಟನಿ ಜನರ ಮನಸ್ಸನ್ನುಗೆದ್ದು ಮತ್ತೆ ಸ್ಥಾಪಿಸಲು ಹೊರಟಿದ್ದು ನಾಯಕನ ಆರಾಧನೆಯನ್ನೇ. 16ನೇ ಶತಮಾನದಲ್ಲಿ ಶೇಕ್ಸ್ಪಿಯರ್ ‘ಜೂಲಿಯಸ್ ಸೀಸರ್’ನಲ್ಲಿ ಎತ್ತಿದ ಪ್ರಶ್ನೆಯು ಚರಿತ್ರೆಯ ಉದ್ದಕ್ಕೂ ಮರುಕಳಿಸುತ್ತಲೇ ಇದೆ. ಪ್ರಭಾವಿಯಾದ ನಾಯಕರು ಅಧಿಕಾರಕ್ಕೆ ಬರುವುದು ಜನಸಾಮಾನ್ಯರ ಕಣ್ಮಣಿಗಳಾಗಿಯೇ. ಆದರೆ ಅವರ ಚಿಂತನೆ ಹಾಗೂ ವ್ಯಕ್ತಿತ್ವಗಳು ಪ್ರಜಾಪ್ರಭುತ್ವದ ಸತ್ವವನ್ನೇ ನಾಶಮಾಡುತ್ತವೆ.
ಆದ್ದರಿಂದಲೇ ಬಾಬಾಸಾಹೇಬ ಅಂಬೇಡ್ಕರ್ಅವರು ಅತ್ಯಂತ ಕಟುವಾಗಿ ಖಂಡಿಸಿದ್ದು ನಾಯಕತ್ವದ ಆರಾಧನೆಯನ್ನೇ. ಅವರು ಬಯಸಿದ್ದು ಬುದ್ಧನು ಮತ್ತು ಅವನಿಗೆ ಮಾದರಿಯಾಗಿದ್ದ ಬುಡಕಟ್ಟುಗಳು ಪಾಲಿಸುತ್ತಿದ್ದ ಪ್ರಜಾಪ್ರಭುತ್ವವಾಗಿತ್ತು. ಭಾರತದ ಪ್ರಜಾಪ್ರಭುತ್ವಆತ್ಮವಿನಾಶದತ್ತ ಖಚಿತವಾದ ಹೆಜ್ಜೆಗಳನ್ನು ಇಟ್ಟಿರುವ ಇಂದಿನ ಸಂದರ್ಭದಲ್ಲಿ ಶೇಕ್ಸ್ ಪಿಯರ್, ಬುದ್ಧ ನೆನಪಾಗುತ್ತಿದ್ದಾರೆ.
ನೆನ್ನೆ ಗೆಳೆಯರ ಜೊತೆಗೆ ಮಾತನಾಡುತ್ತಾ ಶೇಕ್ಸ್ಪಿಯರ್ನ ‘ಜೂಲಿಯಸ್ ಸೀಸರ್’ ನಾಟಕದ ಪ್ರಸ್ತಾಪ ಬಂತು. ಅದೇಕೆ ಆಧುನಿಕ ರಾಜಕೀಯದ ಅನೇಕ ಸನ್ನಿವೇಶಗಳಲ್ಲಿ ಅವನ ನಾಟಕಗಳ ಮಾತುಗಳು ಇಷ್ಟು ಅರ್ಥಗರ್ಭಿತವಾಗಿ ಕಾಣುತ್ತವೆ ಎಂದು ಚರ್ಚಿಸುತ್ತಿದ್ದೆವು. ನಮಗೆ ಗೊತ್ತಿರುವ ಮಟ್ಟಿಗೆ ಶೇಕ್ಸ್ಪಿಯರ್ಗೆ ರಾಜಕಾರಣದಲ್ಲಿ ತಲೆ ಹಾಕುವ ವ್ಯವಧಾನವೇ ಇರಲಿಲ್ಲ.
ಒಬ್ಬ ಸಾಮಾನ್ಯ ನಟನಾಗಿ (ಅಂದರೆ ಸಹಾಯಕ ಪಾತ್ರಗಳಲ್ಲಿ) ಕಂಪನಿ ಸೇರಿಕೊಂಡು ಆನಂತರ ಎಲ್ಲರೂ ಅಚ್ಚರಿ ಪಡುವಂತೆ ಮಹಾನ್ ನಾಟಕಕಾರನಾಗಿ ಅವನು ಬೆಳೆದ. ಜೊತೆಗೆ ಅತ್ಯಂತ ಜನಪ್ರಿಯನೂ ಆಗಿದ್ದ. ಹೀಗಾಗಿ ತನ್ನ 56ನೇ ವಯಸ್ಸಿನಲ್ಲಿ ಯಶಸ್ಸು, ಶ್ರೀಮಂತಿಕೆ ಹಾಗೂ ಸಾಮಾಜಿಕ ಮನ್ನಣೆ ಪಡೆದುಕೊಂಡು ತನ್ನ ಊರಿಗೆ ಮರಳಿದ ಅವನಿಗೆ ರಾಜಕೀಯದ ಒಳಸುಳಿಗಳು ಅರ್ಥವಾಗಿದ್ದು ಹೇಗೆ?
‘ಜೂಲಿಯಸ್ ಸೀಸರ್’ ನಾಟಕವನ್ನೇ ತೆಗೆದುಕೊಳ್ಳಿ. ನಾಟಕದಕತೆಗಾಗಿ ಅವನಿಗೆ ಸಿಕ್ಕಿದ್ದು ಪ್ಲುಟಾರ್ಕ್ಎನ್ನುವವನು ಬರೆದಜೀವನ ಚರಿತ್ರೆಗಳ ಕೃತಿಯಇಂಗ್ಲಿಷ್ಅನುವಾದ ಮತ್ತುಇಂತದೇಆದ ಒಂದಿಷ್ಟು ವಿವರಗಳು. ಆದರೆಇಂಥ ಕಚ್ಚಾ ಸಾಮಗ್ರಿಯಿಂದ ಅವನು ರಚಿಸಿದ್ದು ಒಂದುಅತ್ಯುತ್ತಮವಾದರಾಜಕೀಯ ನಾಟಕ. ಪ್ಲೇಟೋನಕಾಲಕ್ಕಿಂತಲೂ ಮೊದಲೇ ಬಹುಶಃ ಗ್ರೀಕ್ ಸಮಾಜದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಇತ್ತು. ಪ್ಲೇಟೋಅದನ್ನುತನ್ನ ‘ರಿಪಬ್ಲಿಕ್’ನಲ್ಲಿ ವಿಸ್ತರಿಸಿದ.
ಅದೊಂದು ಆದರ್ಶ ಪರವಾದ ಕಲ್ಪನೆಯಾಗಿತ್ತು. ಹಾಗಂತ ಅವನೇನು ಎಲ್ಲರಿಗೂ ಸಮಾನತೆಯನ್ನು ಕಲ್ಪಿಸಿರಲಿಲ್ಲ. ಅವನ ಆದರ್ಶ ಪ್ರಜಾರಾಜ್ಯದಲ್ಲಿ ಗುಲಾಮರಿಗೆ ಹಾಗೂ ಮಹಿಳೆಯರಿಗೆ ಸಮಾನತೆಇರಲಿಲ್ಲ. ರಾಜಕೀಯ ಹಕ್ಕುಗಳೂ ಇರಲಿಲ್ಲ. ಆದರೆಒಂದು ಮಾತಂತೂ ನಿಜ. ಸಮಾನತೆಗಿಂತ ಗ್ರೀಕ್ ಸಂಪ್ರದಾಯದಲ್ಲಿ ಮನುಷ್ಯರು ತಮ್ಮ ವಿವೇಕ ಹಾಗೂರೀಸನ್’ ಮೂಲಕ ಸಮಾಜವನ್ನುಕಟ್ಟುವ ಬಗ್ಗೆ ಚಿಂತನೆಯು ಬೆಳೆದಿತ್ತು. ಮನುಷ್ಯರ ಅತಾರ್ಕಿಕಚಿಂತನೆ ಹಾಗೂ ನಡವಳಿಕೆಗಳ ಬಗ್ಗೆ ಗ್ರೀಕ್ಚಿಂತನೆಯಲ್ಲಿ ಗಾಢವಾದ ಅನುಮಾನಗಳಿದ್ದವು. ಮನುಷ್ಯರುತಮ್ಮ ನಿಧಾರಗಳನ್ನು ತರ್ಕಬದ್ಧವಾಗಿ, ವಿವೇಕಪೂರ್ಣವಾಗಿ ಮಾಡುವುದಿಲ್ಲವೆನ್ನುವ ಅಪನಂಬಿಕೆಯೂ ಇತ್ತು. ಇಂಥ ಚಿಂತನೆಯನ್ನು ಬಳುವಳಿಯಾಗಿ ಪಡೆದಿದ್ದ ರೋಮನ್ ರಾಜಕೀಯವು ರಾಜರು, ದೊರೆಗಳು ಇಲ್ಲದ ಜನಪ್ರತಿನಿಧಿಗಳ ಆಳ್ವಿಕೆಯ ಒಂದು ಪ್ರಯತ್ನವನ್ನು ಮಾಡಿತು. ಇದರ ಒಂದು ಭಾಗವೇ ಜೂಲಿಯಸ್ ಸೀಸರ್ನ ಚರಿತ್ರೆ.
ಶೇಕ್ಸಪಿಯರ್ನ ನಾಟಕವು ಆರಂಭವಾಗುವುದೇಜೂಲಿಯಸ್ ಸೀಸರ್ನ ನಾಯಕತ್ವದಆರಾಧನೆಯ ಬಗ್ಗೆ ಅವನ ಹಳೆಯ ಸಂಗಾತಿಗಳಲ್ಲಿ ಹುಟ್ಟಿಕೊಂಡಿರುವತೀವ್ರ ಅನುಮಾನಗಳಲ್ಲಿ. ಮೂವರು ಟ್ರಯಮ್ವರೇಟ್ರಲ್ಲಿ ಒಬ್ಬನಾದ ಸೀಸರ್ ಈಗ ತನ್ನ ಅಪ್ರತಿಮಯುದ್ಧ ಕೌಶಲ್ಯಗಳಿಂದಾಗಿ, ತನ್ನ ವಿಜಯಗಳಿಂದಾಗಿ ರೋಮ್ನ ಅನಧಿಕೃತ ಚಕ್ರವರ್ತಿಯಾಗಬಹುದಾದ ಸ್ಥಿತಿಗೆ ಬಂದಿದ್ದಾನೆ. ಸಾಮಾನ್ಯ ಜನರು ಅವನನ್ನು ತಮ್ಮ ನಾಯಕ ಮಾತ್ರನಲ್ಲ ಅಧಿದೇವತೆಯೆಂದೇ ತಿಳಿಯತೊಡಗಿದ್ದಾರೆ.
ಬ್ರೂಟಸ್ನೂ ಸೇರಿದಂತೆ ಅವನ ಸಂಗಾತಿಗಳು ಇದರ ಬಗ್ಗೆ ಆತಂಕಿತರಾಗಿದ್ದಾರೆ. ಅವರಲ್ಲಿ ಅನೇಕರು ಅಸೂಯೆಯಿಂದ ವೈಯಕ್ತಿಕದ್ವೇಷದಿಂದಾಗಿ ಸೀಸರ್ನ ವಿರುದ್ಧ ಮಾಡುತ್ತಿದ್ದಾರೆ. ಆದರೆ ಅವರು ಎತ್ತುವ ಪ್ರಶ್ನೆಗಳು ಗಂಭೀರವಾಗಿವೆ. ಸೀಸರ್ ಹೀಗೆ ಅನೈಸರ್ಗಿಕವಾದ ದೈತ್ಯ ವ್ಯಕ್ತಿತ್ವದವನೆಂದಾದರೆ ಪ್ರಜಾಪ್ರಭುತ್ವದ ಗತಿಯೇನು? ಜನಸಾಮಾನ್ಯರು ಅವನ ಬಗ್ಗೆ ಅದೆಂಥ ಭಕ್ತಿಯನ್ನೂ ಬೆಳೆಸಿಕೊಂಡಿದ್ದಾರೆಂದರೆ ಅವರು ಅವನಿಗೆ ಮೂರು ಸಾರಿರೋಮ್ನಕಿರೀಟವನ್ನು ಧರಿಸಲು ಪ್ರಯತ್ನಿಸುತ್ತಾರೆ.
ಅದನ್ನು ತಿರಸ್ಕರಿಸಿರುವ ಸೀಸರ್ ನಿಜವಾಗಿಯೂ ಅಧಿಕಾರದ ಮೋಹದಿಂದ ದೂರವಿದ್ದಾನೆಯೆ? ಅವನಲ್ಲೊಬ್ಬ ಬೆಳೆಯಲು ಕಾದಿರುವ ಸರ್ವಾಧಿಕಾರಿಅಡಗಿಲ್ಲವೆ? ಈ ಪ್ರಶ್ನೆಗಳನ್ನು ಕೇಳುತ್ತಿರುವವರನ್ನು ಒಳಸಂಚುಗಾರರು ಎಂದು ಸಾರಾಸಗಟಾಗಿಕರೆಯಲಾಗುತ್ತದೆ. ಆದರೆ ಅವರಲ್ಲಿ ಬ್ರೂಟಸ್ ನಂಥಒಬ್ಬ ಪ್ರಾಮಾಣಿಕ ವಿಚಾರವಂತನೂ ಇದ್ದಾನೆ. ಅಲ್ಲದೆ ಉಳಿದವರಿಗೂ ಕೂಡ ಸಮಾನತೆ, ಪ್ರಜಾಪ್ರಭುತ್ವದ ಹಿಂದಿನ ಉದಾಹರಣೆಗಳ ನೆನಪಿದೆ. ಆದರೆ ಸಮಸ್ಯೆಯೆಂದರೆ ಸೀಸರ್ನ ಆರಾಧಕರಾದ ಜನಸಾಮಾನ್ಯರಿಗೆ ಇದಾವುದೂ ಬೇಕಿಲ್ಲ. ಅವರಿಗೆ ಒಂದು ಮೂರ್ತಿ ಬೇಕಿದೆಯಷ್ಟೆ ಆರಾಧನೆಗೆ.
ಶೇಕ್ಸ್ಪಿಯರ್ ಈ ನಾಟಕದಲ್ಲಿ ಸಾಮಾನ್ಯ ಜನರನ್ನು ಚಂಚಲ ಮನಸ್ಸಿನವರಾಗಿ, ಅತಾರ್ಕಿಕ ವ್ಯಕ್ತಿಗಳನ್ನಾಗಿ ಹಾಗೂ “ಸ್ವಂತತೆಯೆ ಬಂದಾಗಿ ಮಂದೆಯಲ್ಲಿ ಒಂದಾಗಿ’ ಹೋಗುವವರನ್ನಾಗಿ ನೋಡುತ್ತಾನೆ. ಆಗ ತಾನೆಅಧಿಕಾರ, ಶ್ರೀಮಂತಿಕೆ ಪಡೆಯುತ್ತಿದ್ದ ಮಧ್ಯಮವರ್ಗದ ಶೇಕ್ಸ್ಪಿಯರ್ಜನಸಾಮಾನ್ಯರ ಬಗ್ಗೆ ಸಿನಿಕಲ್ ಆಗಿದ್ದನೆ? ಪೂರ್ವಾಗ್ರಹ ಹೊಂದಿದ್ದನೆ? ಹೀಗೆಲ್ಲಾ ಪ್ರಶ್ನೆಗಳನ್ನು ಕೇಳಲಾಗಿದೆ. ‘ಕೋರಿಯೋಲೇನಸ್’ ನಾಟಕದಲ್ಲಿಯೂ ಇಂಥದೇ ವರ್ಣನೆ ಸಾಮಾನ್ಯರ ಬಗ್ಗೆ ಇದೆ. ಇದನ್ನು ಅಲ್ಲಗಳೆಯುವುದಾಗುವುದಿಲ್ಲ.
ಅದೇ ಹೊತ್ತಿಗೆ ನಾಟಕದ ಮುಖ್ಯ ಪ್ರಶ್ನೆಯನ್ನು ಆಚೆಗಿಡುವುದೂ ಆಗುವುದಿಲ್ಲ. ಪ್ರಜಾಪ್ರಭುತ್ವದ ಬೆನ್ನೆಲುಬಾದ ಪ್ರಜೆಗಳು ಪ್ರಜಾಪ್ರಭುತ್ವದ ಮೂಲ ಗುಣಕ್ಕೇ ವಿರೋಧಿಯಾದ ನಾಯಕನ ಆರಾಧನೆ, ಅವನ ಅತಿಮಾನುಷ ಶಕ್ತಿಯ ಬಗ್ಗೆ ನಂಬಿಕೆ ಮತ್ತುಅವನನ್ನು ವಿರೋಧಿüಸುವವರ ಬಗ್ಗೆ ಅಪಾರವಾದಕ್ರೌರ್ಯ ಇವುಗಳನ್ನೇ ಬೆಳೆಸಿಕೊಂಡರೆ ಅದಾವರೀತಿಯ ಪ್ರಜಾಪ್ರಭುತ್ವವು ಇರಲು ಸಾಧ್ಯ?
ಹೀಗಾಗಿ ಒಂದುರೀತಿಯಲ್ಲಿ ಈ ನಾಟಕದಲ್ಲಿ ಸೀಸರ್ ಮುಖ್ಯನಲ್ಲ. ಅವನಿಲ್ಲದಿದ್ದರೆ ಜನರು ಇನ್ನೊಬ್ಬ ಆರಾಧ್ಯಮೂರ್ತಿಯನ್ನು ನಿರ್ಮಿಸಿಕೊಳ್ಳುತ್ತಿದ್ದರು. ಈ ನಾಟಕದ ಅತ್ಯಂತ ಪ್ರಸಿದ್ಧವಾದ ಭಾಗವೆಂದರೆ ಸೀಸರ್ನ ಕೊಲೆಯ ನಂತರ ಅವನ ಶವವನ್ನುಇಟ್ಟಿರುವ ಸಾರ್ವಜನಿಕ ಸ್ಥಳದಲ್ಲಿ ಮೊದಲು ಬ್ರೂಟಸ್ಆನಂತರ ಮಾರ್ಕ್ಆ್ಯಂಟನಿ ಮಾಡುವ ಭಾಷಣಗಳ ಭಾಗ ಆಕಾಲದಲ್ಲಿಯೇ ಶೇಕ್ಸ್ಪಿಯರ್ಕಂಡುಕೊಂಡಿದ್ದೆಂದರೆ ಜನರು ಕೇಳಬಯಸುವುದು ಸತ್ಯವನ್ನಲ್ಲ, ಅವರಿಗೆ ಬೇಕಾದದ್ದು ಭಾಷಣ ಪಟುತ್ವ.
ಅದರಲ್ಲೂ ವಿಚಾರದ ಬದಲಾಗಿ ಭಾವನೆಗಳ ಉದ್ರೇಕ ಹಾಗೂ ಮನುಷ್ಯ ಸ್ವಭಾವದ ತಳದಲ್ಲಿಯೇ ಇರುವ ಪ್ರವೃತ್ತಿಗಳನ್ನು ಪ್ರಚೋದಿಸುವ ಭಾಷೆ. ಅಂದರೆ ಮುಖ್ಯವಾಗಿರುವುದು ಜನರು ವಿಚಾರ ಮಾಡದಂತೆ ಅವರನ್ನುತೀವ್ರವಾದ ಭಾವನೆಗಳ ಲೋಕಕ್ಕೆ ತಳ್ಳುವುದು. ಬ್ರೂಟಸ್ನ ವಾದವೆಂದರೆ, ನಾನು ಸೀಸರ್ನನ್ನು ಪ್ರೀತಿಸುತ್ತಿದ್ದೆ. ಆದರೆ ಅವನು ಪ್ರಜಾಪ್ರಭುತ್ವದ ಶತುೃವಾಗ ತೊಡಗಿದ್ದರಿಂದ ಅವನನ್ನು ಕೊಂದೆ. ಏಕೆಂದರೆ ನಾನು ರೋಮ್ವನ್ನು ಹೆಚ್ಚು ಪ್ರೀತಿಸುತ್ತೇನೆ’.
ಆದರೆ ನಂತರತನ್ನ ಭಾಷಣದಲ್ಲಿ ಈ ಮಾತುಗಳನ್ನು ಬಳಸುವುದು ಬ್ರೂಟಸ್ತನ್ನ ಸ್ನೇಹಿತನ ಕೊಲೆಗಾರ, ಗೆಳೆಯನಿಗೆ ದ್ರೋಹ ಮಾಡಿದವನು ಎಂದು ತೋರಿಸಲು! ಅತ್ಯಂತ ಆಶ್ಚರ್ಯಕರವಾದ ಮಾತೆಂದರೆ ಮಾರ್ಕ್ಆ್ಯಂಟನಿಯ ಪ್ರಕಾರ ಮನುಷ್ಯರಿಗೆ ಭೂಷಣವಾದ ವಿಚಾರವಂತಿಕೆಯು ಈಗ ಪಶುಗಳಲ್ಲಿ ಹೋಗಿ ಸೇರಿಕೊಂಡಿದೆ. ನಿಜವೇನೆಂದರೆ ಅವನೇ ಈ ವಿಚಾರವಂತಿಕೆಯ ಬದಲಾಗಿ ಭಾವನೆಗಳ ನಾಟಕವೊಂದನ್ನುಆಡುತ್ತಿದ್ದಾನೆ!
ಇಲ್ಲಿ ಮುಖ್ಯ ಪ್ರಶ್ನೆಯೆಂದರೆ ಪ್ರಜಾಪ್ರಭುತ್ವದಆಧಾರವುಯಾವುದಾಗಿರಬೇಕು? ಸೀಸರ್ನ ವಿರುದ್ಧ ನಿಂತ ಒಳಸಂಚುಗಾರರು ನಂಬಿದ್ದೇನೆಂದರೆ ನಾಯಕನಆರಾಧನೆಯು ಪ್ರಜಾಪ್ರಭುತ್ವದ ವಿನಾಶದಕಾರಣವಾಗಬಲ್ಲದು. ಆದರೆಅವರು ಮಾಡುವಕೊಲೆಯೂ ಪ್ರಜಾಪ್ರಭುತ್ವದ ವಿನಾಶವೆಂಬುದುಅವರಿಗೆ ತಿಳಿದಿಲ್ಲ. ವ್ಯಂಗ್ಯವೇನೆಂದರೆ ಮಾರ್ಕ್ಆ್ಯಂಟನಿ ಜನರ ಮನಸ್ಸನ್ನುಗೆದ್ದು ಮತ್ತೆ ಸ್ಥಾಪಿಸಲು ಹೊರಟಿದ್ದು ನಾಯಕನ ಆರಾಧನೆಯನ್ನೇ. 16ನೇ ಶತಮಾನದಲ್ಲಿ ಶೇಕ್ಸ್ಪಿಯರ್ಎತ್ತಿದ ಪ್ರಶ್ನೆಯುಚರಿತ್ರೆಯಉದ್ದಕ್ಕೂ ಮರುಕಳಿಸುತ್ತಲೇ ಇದೆ. ಪ್ರಭಾವಿಯಾದ ನಾಯಕರು ಅಧಿಕಾರಕ್ಕೆ ಬರುವುದು ಜನಸಾಮಾನ್ಯರ ಕಣ್ಮಣಿಗಳಾಗಿಯೇ. ಆದರೆಅವರಚಿಂತನೆ ಹಾಗೂ ವ್ಯಕ್ತಿತ್ವಗಳು ಪ್ರಜಾಪ್ರಭುತ್ವದ ಸತ್ವವನ್ನೇ ನಾಶಮಾಡುತ್ತವೆ.
ಆದ್ದರಿಂದಲೇ ಬಾಬಾಸಾಹೇಬ ಅಂಬೇಡ್ಕರ್ಅವರುಅತ್ಯಂತಕಟುವಾಗಿ ಖಂಡಿಸಿದ್ದು ನಾಯಕತ್ವದಆರಾಧನೆಯನ್ನೇ. ಸ್ವತಃಅತ್ಯಂತ ಪ್ರಭಾವಿಯಾದಜನನಾಯಕರಾಗಿದ್ದಅವರು ನಾಯಕರುಗಳ ವರ್ಚಸ್ಸಿನ ಬಗ್ಗೆ ತುಂಬಾ ಶಂಕೆಗಳನ್ನು ಇಟ್ಟುಕೊಂಡಿದ್ದರು. ಅವರು ಬಯಸಿದ್ದು ಬುದ್ಧನು ಮತ್ತು ಅವನಿಗೆ ಮಾದರಿಯಾಗಿದ್ದ ಬುಡಕಟ್ಟುಗಳು ಪಾಲಿಸುತ್ತಿದ್ದ ಪ್ರಜಾಪ್ರಭುತ್ವವಾಗಿತ್ತು. ಹೀಗಾಗಿ ಅವರು ಬುದ್ಧನ ಬಗೆಗಿನ ತಮ್ಮ ಪುಸ್ತಕದಲ್ಲಿ ಬುದ್ಧನನ್ನುದೇವಪುರುಷನ ಬದಲಾಗಿಒಬ್ಬ ವಿಚಾರವಾದಿಯ ಹಾಗೆ ವರ್ಣಿಸಿದ್ದಾರೆ. ಬುದ್ಧನು ಉಪದೇಶಿಸಿದ ದುಃಖದ ಬಗೆಗಿನ ವ್ಯಾಖ್ಯಾನವನ್ನು ಅದು ಅವನದಲ್ಲವೆಂದು ತಿರಸ್ಕರಿಸುತ್ತಾರೆ.
ಬುದ್ಧನ ಸಾವಿನ ಬಗ್ಗೆ ಇರುವಐತಿಹ್ಯವೊಂದನ್ನುಅವರು ನಂಬಿದ ಪ್ರಜಾಪ್ರಭುತ್ವದ ನಡುವಳಿಕೆಯ ಉದಾಹರಣೆಯಾಗಿ ನೋಡಬಹುದಾಗಿದೆ. ಬುದ್ಧನ ಪರಿನಿರ್ವಾಣವಾದದ್ದು ಕುಶಿನಗರದ ಹತ್ತಿರ. ಅದು ಮಲ್ಲರು ಎಂದು ಕರೆಯಲಾಗುತ್ತಿದ್ದ ಬುಡಕಟ್ಟಿಗೆ ಹತ್ತಿರವಾದ ಪ್ರದೇಶ. ಅವನ ಸಾವಿನ ಸುದ್ದಿ ಬಂದಾಗ ಮಲ್ಲರು ಸಭೆಯಲ್ಲಿಚರ್ಚೆಯೊಂದನ್ನು ನಡೆಸುತ್ತಿದ್ದರು. ಹೀಗಾಗಿ ಮೊದಲು ಈ ಚರ್ಚೆಯನ್ನು ಮುಗಿಸಿ ಆಮೇಲೆ ಬುದ್ಧನ ಸಾವಿನ ಬಗ್ಗೆ ಚಿಂತಿಸುವುದುಎಂದು ನಿರ್ಣಯಿಸಿ ಮುಂದುವರೆಯಲಾಯಿತಂತೆ. ‘ನಿಮಗೆ ನೀವೇ ದೀಪವಾಗಿ’ ಎಂದ ಬುದ್ಧನ ನಿಜವಾದ ಅನುಯಾಯಿಗಳು ಅವರು. ಭಾರತದ ಪ್ರಜಾಪ್ರಭುತ್ವ ಆತ್ಮವಿನಾಶದತ್ತ ಖಚಿತವಾದ ಹೆಜ್ಜೆಗಳನ್ನು ಇಟ್ಟಿರುವ ಇಂದಿನ ಸಂದರ್ಭದಲ್ಲಿ ಶೇಕ್ಸ್ ಪಿಯರ್ ಬುದ್ಧ ನೆನಪಾಗುತ್ತಿದ್ದಾರೆ.
– ಪ್ರೊ. ರಾಜೇಂದ್ರಚೆನ್ನಿ
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243