ದಿನದ ಸುದ್ದಿ

ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ ; ಬಾಲಕರ ಮೇಲುಗೈ

Published

on

ಸುದ್ದಿದಿನ ಡೆಸ್ಕ್ : 2022-23ನೇ ಶೈಕ್ಷಣಿಕ ವರ್ಷದಲ್ಲಿ ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ – ಸಿಇಟಿ ಫಲಿತಾಂಶ ( CET Result ) ಇಂದು ಪ್ರಕಟವಾಗಿದ್ದು, ಎಲ್ಲ ವಿಭಾಗಗಳಲ್ಲೂ ಈ ಬಾರಿ ಬಾಲಕರೇ ಮೇಲುಗೈ ಸಾಧಿಸಿರುವುದು ವಿಶೇಷವಾಗಿದೆ.

ಬೆಂಗಳೂರಿನಲ್ಲಿ ಫಲಿತಾಂಶವನ್ನು ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ ನಾರಾಯಣ, ಜೂನ್ 16 ಮತ್ತು 17 ರಂದು ರಾಜ್ಯದ 486ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಸಿಇಟಿ ಪರೀಕ್ಷೆಗೆ ಒಟ್ಟು 2 ಲಕ್ಷ 10 ಸಾವಿರದ 829 ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ತಿಳಿಸಿದರು.

ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಯಲಹಂಕದ ಅಪೂರ್ವ್ ಟಂಡನ್ ಶೇಕಡ 9.861 ಅಂಕ ಗಳಿಸುವ ಮೂಲಕ ಮೊದಲ ರ್‍ಯಾಂಕ್ ಪಡೆದಿದ್ದರೆ, ಬೆಂಗಳೂರಿನ ಮತ್ತೊಬ್ಬ ವಿದ್ಯಾರ್ಥಿ ಸಿದ್ದಾರ್ಥ ಸಿಂಗ್ ಶೇಕಡ 98.33 ಅಂಕಗಳಿಸುವ ಮೂಲಕ 2ನೇ ರ್‍ಯಾಂಕ್ ಪಡೆದಿದ್ದಾರೆ.

ಇದನ್ನೂ ಓದಿ | ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪಿ.ಜಿ ವ್ಯಾಸಂಗಕ್ಕಾಗಿ ಹಣಕಾಸಿನ ನೆರವು

ಕೃಷಿ ವಿಭಾಗದಲ್ಲಿ ಬೆಂಗಳೂರಿನ ಅರ್ಜುನ್ ರವಿಶಂಕರ್ ಶೇಕಡ 96.29 ಗಳಿಸಿ ಮೊದಲ ರ್‍ಯಾಂಕ್ ಪಡೆದಿದ್ದರೆ, ಬೆಂಗಳೂರಿನ ಮತ್ತೋರ್ವ ವಿದ್ಯಾರ್ಥಿ ಸುಮೀತ್ ಎಸ್. ಪಾಟೀಲ್ ಶೇಕಡ 96.20 ಅಂಕಗಳಿಸಿ 2ನೇ ರ್‍ಯಾಂಕ್ ಪಡೆದಿದ್ದಾರೆ.

ಪಶುವೈದ್ಯ ವಿಭಾಗದಲ್ಲಿ ಬೆಂಗಳೂರಿನ ಹೃಷಿಕೇಶ್ ನಾಗಭೂಷಣ್ ಗಂಗೂಲಿ ಶೇಕಡ 98.33 ಅಂಕ ಗಳಿಸಿ ಮೊದಲ ರ್‍ಯಾಂಕ್ ಪಡೆದಿದ್ದರೆ, ಬೆಂಗಳೂರಿನವರೇ ಆದ ಮನೀಷ್ ಎಸ್.ಎ ಶೇಕಡ 97.22 ಅಂಕ ಗಳಿಸಿ ದ್ವಿತೀಯ ರ್‍ಯಾಂಕ್ ಪಡೆದಿದ್ದಾರೆ. ಫಾರ್ಮೆಸಿ ವಿಭಾಗದಲ್ಲಿ ಬೆಂಗಳೂರಿನ ಶಿಶೀರ್ ಆರ್.ಕೆ ಶೇಕಡ 98.88 ಗಳಿಸಿ ಪ್ರಥಮ ರ್‍ಯಾಂಕ್ ಪಡೆದಿದ್ದರೆ, ಬೆಂಗಳೂರಿನ ಮತ್ತೋರ್ವ ವಿದ್ಯಾರ್ಥಿ ಹೃಷಿಕೇಶ್ ನಾಗಭೂಷಣ್ ಗಂಗೂಲಿ ಶೇಕಡ 98.33ಅಂಕಗಳಿಸಿ ದ್ವಿತೀಯ ರ್‍ಯಾಂಕ್ ಪಡೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version