ದಿನದ ಸುದ್ದಿ

ಆ.20ಕ್ಕೆ ಸಿಇಟಿ ಫಲಿತಾಂಶ ಪ್ರಕಟ

Published

on

ಸುದ್ದಿದಿನ, ಬೆಂಗಳೂರು:ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಇಂದು ಮಾತನಾಡಿದ್ದು, ಆ.20ರಂದು ಸಿಇಟಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಈ ವೇಳೆ, ಕಳೆದ ಬಾರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಶುಲ್ಕದಲ್ಲಿ ಶೇ.33ರಷ್ಟು ಹೆಚ್ಚಳ ಮಾಡಲಾಗಿತ್ತು.

ಸದ್ಯ ಕೊರೋನಾ ಸೋಂಕಿನಿಂದ ಸಂಕಷ್ಟ ಎದುರಾಗಿರುವ ಹಿನ್ನೆಲೆ ಕಳೆದ ಬಾರಿಯ ಶುಲ್ಕವನ್ನೇ ಮುಂದುವರಿಸಲಾಗುತ್ತದೆ. ಸೀಟು ಹಂಚಿಕೆಯೂ ಕಳೆದ ಬಾರಿಯಂತೆಯೇ ನಡೆಯಲಿದ್ದು, ಅಕ್ಟೋಬರ್ ನಲ್ಲಿ ಕೌನ್ಸೆಲಿಂಗ್ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version