ದಿನದ ಸುದ್ದಿ

ಚನ್ನಗಿರಿ | ಡಾ.ಮಹಮ್ಮೂದ್ ಖಾನ್ ಹಾಗೂ ಡಾ.ಆನಂದ್ ಅವರಿಗೆ ಬೀಳ್ಕೊಡುಗೆ

Published

on

ಸುದ್ದಿದಿನ,ಚನ್ನಗಿರಿ:ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಹಮಮ್ಮೂದ್ ಖಾನ್ ಹಾಗೂ ಸಮಾಜ ಶಾಸ್ತ್ರದ ಮುಖ್ಯಸ್ಥರಾದ ಡಾ. ಆನಂದ್ ಆವರು ನಿವೃತಿ ಆದ ಪ್ರಯುಕ್ತ ಕಾಲೇಜಿನ ಅಧ್ಯಾಪಕ ವೇದಿಕೆ ಮೂಲಕ ಬೀಳ್ಕೊಡುಗೆ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಡಾ. ಮಹಮ್ಮೂದ್ ಖಾನ್

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಅಮೃತೇಶ್ವರ ಬಿ.ಜಿ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತಿಯಾದ ಅಧ್ಯಾಪಕರ ಬಗ್ಗೆ ಸಹೋದ್ಯೋಗಿಗಳು, ಆಪ್ತರು ಹಾಗೂ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು.

ಡಾ.ಆನಂದ್

ಈ ಸಂದರ್ಭದಲ್ಲಿ ಐ ಕ್ಯೂ ಎ ಸಿ ಸಂಯೋಜಕರಾದ ಪ್ರೊ.ವಿಜಯ್ ಕುಮಾರ್, ಅಧ್ಯಾಪಕ ವೇದಿಕೆಯ ಅಧ್ಯಕ್ಷರಾದ ಪ್ರೊ, ಲಕ್ಷ್ಮಣ್, ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಪ್ರೊ.ಷಣ್ಮುಖಪ್ಪ, ಕನ್ನಡ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ರವಿ, ಪ್ರೊ.ಗೌರಮ್ಮ ಹಾಗೂ ಇತರೆ ವಿಭಾಗದ ಬೋಧಕವರ್ಗದವರು ಬೋಧಕೇತರ ವರ್ಗದವರು, ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version