ದಿನದ ಸುದ್ದಿ
ಚನ್ನಗಿರಿ ಪುರಸಭೆ ಉಪಚುನಾವಣಾ ವೇಳಾಪಟ್ಟಿ
ಸುದ್ದಿದಿನ,ದಾವಣಗೆರೆ : ಚನ್ನಗಿರಿ ಪುರಸಭೆಯ ವಾರ್ಡ್ ಸಂಖ್ಯೆ 16-ನೂರಾನಿ ಮಸೀದಿ ಬಡಾವಣೆಗೆ ಉಪಚುನಾವಣೆಯನ್ನು ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೊರಡಿಸಿರುತ್ತಾರೆ.
ವಾರ್ಡ್ ಸಂಖ್ಯೆ-16 ನೂರಾನಿ ಮಸೀದಿ ಬಡಾವಣೆಗೆ ಹಿಂದುಳಿದ ವರ್ಗ(ಎ) ಮಹಿಳೆ ಮೀಸಲಾತಿ ನಿಗಧಿಯಾಗಿರುತ್ತದೆ.
ಮೇ.02 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗುವುದು. ಮೇ.09 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ. ಮೇ.10 ರಂದು ನಾಮಪತ್ರಗಳನ್ನು ಪರಿಶೀಲಿಸಲು ಕೊನೆಯ ದಿನ.
ಮೇ.12 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯದಿನ. ಮೇ.20 ರಂದು ಮತದಾನ ಅಗತ್ಯವಿದ್ದರೆ, ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಸಲಾಗುವುದು. ಮೇ.21 ರಂದು ಮರು ಮತದಾನ ಇದ್ದಲ್ಲಿ ಮತದಾನ ನಡೆಸಲಾಗುವುದು. ಮೇ.22 ರಂದು ಬೆಳಿಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಮಾಡಲಾಗುವುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243