ದಿನದ ಸುದ್ದಿ

ಚಿರು ಅಗಲಿ‌ ಇಂದಿಗೆ ಒಂದು ತಿಂಗಳು : ಪೂಜೆ ಸಲ್ಲಿಸಿ ಕಣ್ಣೀರಿಟ್ಟ ಕುಟುಂಬ

Published

on

ಸುದ್ದಿದಿನ,ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ದೈಹಿಕವಾಗಿ ದೂರವಾಗಿ ಬುಧವಾರಕ್ಕೆ ಒಂದು ತಿಂಗಳು ಆಗಲಿದೆ. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಕನಕಪುರದ ನೆಲಗುಳಿಯ ಫಾರ್ಮ್ ಹೌಸ್‍ಗೆ ಭೇಟಿ ಕೊಟ್ಟಿದ್ದಾರೆ.

ಚಿರಂಜೀವಿ ಸರ್ಜಾ ಅವರು ಜೂನ್ 7 ರಂದು ಹೃದಯಾಘಾತವಾಗಿ ಮೃತಪಟ್ಟಿದ್ದರು. ಸಹೋದರ ಧ್ರುವ ಸರ್ಜಾ ತಮ್ಮ ಆಸೆಯಂತೆ ಅಣ್ಣ ಚಿರಂಜೀವಿಯ ಅಂತ್ಯಕ್ರಿಯೆಯನ್ನು ಕನಕಪುರದಲ್ಲಿರುವ ನೆಲಗುಳಿಯ ಬೃಂದಾವನ ಫಾರ್ಮ್ ಹೌಸ್‍ನಲ್ಲಿ ನೆರವೇರಿಸಿದ್ದರು. ಚಿರಂಜೀವಿ ಸರ್ಜಾ ಅವರು ದೈಹಿಕವಾಗಿ ದೂರವಾಗಿ ಜುಲೈ 7ಕ್ಕೆ ಒಂದು ತಿಂಗಳು ಕಳೆಯಲಿದೆ.

ಇಂದೇ ಕುಟುಂಬ ಸದಸ್ಯರು ಫಾರ್ಮ್ ಹೌಸ್‍ಗೆ ಭೇಟಿ ಕೊಟ್ಟು ಚಿರಂಜೀವಿ ಸರ್ಜಾ ತಿಂಗಳ ಕಾರ್ಯ ಮಾಡಿದ್ದಾರೆ. ಚಿರು ಸಮಾಧಿ ಗೆ ಸೋದರ ಧ್ರುವ ಸರ್ಜಾ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಅರ್ಜುನ್ ಸರ್ಜಾ, ಮೇಘನಾ ರಾಜ್, ಚಿರು ಅಪ್ಪ, ಅಮ್ಮ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಚಿರಂಜೀವಿ ಸರ್ಜಾ ಅವರನ್ನು ನೆನೆದು ಕುಟುಂಬ ಸದಸ್ಯರು ಕಣ್ಣೀರಿಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version