ದಿನದ ಸುದ್ದಿ

Live: ಹಿಂದೂ ಮಹಾ ಗಣಪತಿ ಶೋಭಾಯಾತ್ರೆಗೆ ವರುಣನ ಸಿಂಚನ !

Published

on

ಸುದ್ದಿದಿನ, ಚಿತ್ರದುರ್ಗ (ಸೆ.29): ನಗರದಲ್ಲಿ ಇಂದು ಬೆಳಗ್ಗೆ 9.30ಕ್ಕೆ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಲಿದ್ದು, ಬೆಳಗಿನ ಜಾವಾ 4.10ಕ್ಕೆ ಮಳೆರಾಯನ ಸಿಂಚನವಾಗಿದೆ.

ಶೋಭಾಯಾತ್ರೆಯಲ್ಲಿ ಭಾಗವಹಿಸಲು ಶಿವಮೊಗ್ಗ. ಚಿಕ್ಕಮಗಳೂರು, ಮಂಗಳೂರು, ಉಡುಪಿ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಜನ ಆಗಮಿಸಿದ್ದು, ಅದ್ದೂರಿ ಮರೆವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಉತ್ಸವದ ಯಶಸ್ವಿಗೆ 500ಕ್ಕೂ ಹೆಚ್ಚು ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ.

ಪೊಲೀಸ್ ಸರ್ಪಗಾವಲು

ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ಸಂಭಿವಿಸದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಿದ್ದು, ಇದಕ್ಕಾ ಪೊಲೀಸ್ ಸರ್ಪಗಾವಲು ನಿಯೋಗಿಸಲಾಗಿದೆ. ಶೋಭಾಯಾತ್ರೆ ಸಂಚರಿಸುವ ನಗರದ ಮುಖ್ಯ ರಸ್ತೆಯ ಆಯಕಟ್ಟಿನ ಜಾಗಗಳಲ್ಲಿ ಬ್ಯಾರಿಕೇಡ್‍ಗಳನ್ನು ನಿರ್ಮಿಸಲಾಗಿದೆ. ನಗರದ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಿದ್ದು, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರು ಹಾಗೂ ದಾವಣಗೆರೆ, ಹುಬ್ಬಳಿಗೆ ತೆರಳುವ ವಾಹನಗಳಿಗೆ ಬದಲಿ ಮಾರ್ಗ ತೋರಿಸಲಾಗಿದೆ.

ವಿವಿಧ ಸಂಘ ಸಂಸ್ಥೆಗಳಿಂದ ಅನ್ನದಾಸೋಹ

ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ವಿವಿಧ ಸಂಘ, ಸಂಸ್ಥೆಗಳು ಉಚಿತವಾಗಿ ಪುಳಿಯೊಗರೆ, ಪಲಾವ್, ಮೊಸರನ್ನ, ಚಿತ್ರಾನ್ನ ಹಾಗೂ ಕುಡಿಯುವ ನೀರು ವಿತರಿಸಲು ಸಿದ್ಧತೆ ಮಾಡಿಕೊಂಡಿವೆ. ಚಿತ್ರದುರ್ಗ ಐಬಿ ಬಳಿಯ ಜೈನ್ ವೃತ್ತದ ಹತ್ತಿರ, ರೆಡ್ಡಿ ಜನಸಂಘ ಬಿಲ್ಡಿಂಗ್ ಹತ್ತಿರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ವಿತರಿಸಲಾಗುತ್ತದೆ.

 

Trending

Exit mobile version