ದಿನದ ಸುದ್ದಿ

Live: ಚಿತ್ರದುರ್ಗ ಹಿಂದು ಮಹಾ ಗಣಪತಿ ಶೋಭಾಯಾತ್ರೆ ಸಿದ್ಧತೆ ಹೀಗಿದೆ ನೋಡಿ

Published

on

ಚಿತ್ರದುರ್ಗ, ಸುದ್ದಿದಿನ (ಸೆ.28): ರಾಜ್ಯದ ಗಮನ ಸೆಳೆದಿರುವ ಚಿತ್ರದುರ್ಗ ಹಿಂದೂ ಮಹಾ ಗಣಪತಿ ವಿಸರ್ಜನೆ ಶೋಭಾಯಾತ್ರೆ ಸೆ.29ರ ಶನಿವಾರ ನಡೆಯಲಿದ್ದು, ನಗರದ ತುಂಬಾ ಸಿದ್ಧತೆ ಕಾರ್ಯಗಳು ಭರದಿಂದ ಸಾಗಿವೆ. ಚಿತ್ರದುರ್ಗದ ಮುಖ್ಯ ರಸ್ತೆಗಳು ಸಂಪೂರ್ಣ ಕೇಸರಿಮಯವಾಗಿದ್ದು, ಉತ್ಸವಕ್ಕೆ ಶುಭಕೋರುವ ಫೆಕ್ಸ್ ಗಳು ರಸ್ತೆ ಪಕ್ಕದಲ್ಲಿ ರಾರಾಜಿಸುತ್ತಿವೆ.

ಶೋಭಾಯಾತ್ರೆ ಯಶಸ್ವಿಗೆ ಗುರುವಾರ ಬೈಕ್ ರ್ಯಾಲಿ ನಡೆಸಲಾಯಿತು. ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಕನ್ನಕ ವೃತ್ರದಲ್ಲಿ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಈ ವೇಳೆ ವಂದೇ ಮಾತರಂ, ಜೈ ಕರ್ನಾಟಕ, ಬೈ ಭಜರಂಗಿ ಎಂಬ ಘೋಷಣೆಗಳು ಮೊಳಗಿದವು. ಚಿತ್ರದುರ್ಗದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ವಿಎಚ್‍ಪಿ, ಬಜರಂಗದಳದ ಪ್ರಮುಖರಾದ ಪ್ರಭಂಜನ್, ಪಿ.ರುದ್ರೇಶ್ , ಸುರೇಶ್ ಬಾಬು ಇತರರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

500ಕ್ಕೂ ಹೆಚ್ಚು ಕಾರ್ಯಕರ್ತರು ಸಕ್ರಿಯ

ಶೋಭಾಯಾತ್ರೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಮುಖ್ಯ ರಸ್ತೆಯಲ್ಲಿ ಸ್ವಚ್ಛತೆ ಕಾರ್ಯ ನಡೆದಿವೆ. ಶುಕ್ರವಾರ ಬೆಳಗ್ಗೆಯೇ ನಗರಸಭೆ ಪೌರ ಕಾರ್ಮಿಕ ಸಿಬ್ಬಂದಿ ರಸ್ತೆಗಳಲ್ಲಿ ಸ್ವಚ್ಛತೆ ಕಾರ್ಯ ನಡೆಸಿದರು. ನಗರದ ಅಲಂಕಾರಕ್ಕೆ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರರು ಕೆಲಸ ಮಾಡುತ್ತಿದ್ದಾರೆ. ಸಾವಿರಾರು ಮೀಟರ್ ಉದ್ದದ ಕೇಸರಿ ಬಟ್ಟೆಗಳನ್ನು ಚಿತ್ರದುರ್ಗ ನಗರದ ವಿವಿಧೆಡೆ ಕಟ್ಟಲಾಗಿದೆ.

ಚಿತ್ರದುರ್ಗ ಹಿಂದು ಮಾಹಾ ಗಣಪತಿ ವಿಸರ್ಜನೆ ಎಲ್ಲಿ

ಚಿತ್ರದುರ್ಗ ಹಿಂದು ಮಾಹಾ ಗಣಪತಿ ವಿಸರ್ಜನೆಯನ್ನು ಐತಿಹಾಸಿಕ ಚಿತ್ರದುರ್ಗದ ಚಂದ್ರವಳ್ಳಿ ಕೆರೆಯಲ್ಲಿ ಮಾಡಲಾಗುತ್ತದೆ. ತೆರೆದ ವಾಹನದಲ್ಲಿ ಹಿಂದು ಮಾಹಾ ಗಣಪತಿ ಪ್ರತಿಷ್ಠಾಪನೆ ಮಾಡಿ ಬೆಳಗ್ಗೆ 10.30ಕ್ಕೆ ಮೆರವಣಿಗೆ ಆರಂಭಿಸಲಾಗುತ್ತದೆ. ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಯುವಕರು ಸ್ವಯಂ ಪ್ರೇರಿತರಾಗಿ ಆಗಮಿಸಿ ಉತ್ಸವದಲ್ಲಿ ಭಾಗವಹಿಸುವುದು ವಿಶೇಷ.

 

Trending

Exit mobile version