ರಾಜಕೀಯ
ಬ್ಯಾಂಕ್‌ಗಳಿಗೆ ಸಾಲ ಮನ್ನಾ ಹಣ ಪಾವತಿ; ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ
ಸುದ್ದಿದಿನ ಬೆಂಗಳೂರು: ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾದ ಸಂಪೂರ್ಣ ಹಣವನ್ನು ಬಿಡುಗಡೆ ಮಾಡಲಾಗಿದ್ದು, ರೈತರು ಋಣಮುಕ್ತ ಆಗಲಿದ್ದಾರೆ ಎಂದು ಘೋಷಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಇದರಿಂದ ನಿಮ್ಮ ಮೇಲಿದ್ದ 9,450 ಕೋಟಿ ರೂ. ಹೊರೆ ಇಳಿದಂತಾಗಿದೆ ಎಂದರು.
ವಾಣಿಜ್ಯ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದು, ಬ್ಯಾಂಕ್‌ಗಳ ಅಧಿಕಾರಿಗಳಿಂದ ರೈತರು ಸಾಲ ಪಡೆದಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ನಾಳೆಯಿಂದಲೇ ಮಾಹಿತಿ ಪಡೆದು 30.000 ಕೋಟಿ ರೂ. ಬಾಬ್ತನ್ನು ಐದು ವರ್ಷ ಐದು ಕಂತುಗಳಲ್ಲಿ ತೀರಿಸುವುದಾಗಿ ತಿಳಿಸಿದ್ದಾರೆ.