ದಿನದ ಸುದ್ದಿ
ಉತ್ತರ ಕರ್ನಾಟಕವನ್ನೇ ಕೇಂದ್ರೀಕರಿಸಿ ಎಚ್.ಡಿ.ಕೆ ಭಾಷಣ
ಸುದ್ದಿದಿನ ಡೆಸ್ಕ್ | ಭಾರತ ಜನನಿಯ ತನುಜಾತೆ ಎಂದು ಹೇಳುವ ಮೂಲಕ ಭಾಷಣ ಆರಂಭಿಸಿದ ಸಿಎಂ ಕುಮಾರಸ್ವಾಮಿ ಅವರು ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸದ ಶುಭಾಷಯ ಕೋರಿದರು.
ಆಧುನಿಕ ಪ್ರಪಂಚ ಕಂಡ ಅತ್ಯಂತ ಪ್ರಭಾವಶಾಲಿ ಆಯುಧ ಅಂಹಿಸೆ. ಅಂಹಿಸಾ ಅಸ್ತ್ರದಿಂದ ಸ್ವತಂತ್ರ ಗೆದ್ದುಗೊಂಡ ವೀರ ಪರಂಪರೆಯವರು ನಾವು.ಸ್ವಾತಂತ್ರ್ಯ ಸತ್ಯಾಗ್ರಹ ಮತ್ತು ಹೋರಾಟದಲ್ಲಿ ಪಾಲ್ಗೊಂಡವರಲ್ಲಿ ಉತ್ತರ ಕರ್ನಾಟಕದ ಸಂಖ್ಯೆ ಗಣನೀಯವಾಗಿದೆ. ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವು ಮಹನೀಯರು ಸ್ವತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದರು ಎಂದರು.
ಗಾಂಧಿ ಅವರ 150 ನೇ ಜಯಂತಿ ಸಂಭ್ರಮದಲ್ಲಿ ರಾಜ್ಯಾದ್ಯಂತ ಗಾಂಧಿ 150 ಒಂದು ರಂಗ ಪಯಣ ಶೀರ್ಷಿಕೆ ಅಡಿ 1 ಸಾವಿರ ರಂಗ ಪ್ರದರ್ಶನ ಮಾಡಲಾಗಿತ್ತದೆ. ಗಾಂಧಿ ಅವರು ಭಾಗಿಯಾಗಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆಯಿತು.
ಇದು ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಿಡಿದ ಕೈಗನ್ನಡಿಯಾಗಿದೆ.ನೂರಾರು ವರ್ಷ ಆಳಿದ ರಾಷ್ಟ್ರಕೂಟ, ಗಂಗ, ಕದಂಬ ಚಾಲುಕ್ಯ ಹೊಯ್ಸಳ ವಿಜಯನಗರ ಸಾಮ್ರಾಜ್ಯದ ಹಿರಿಮೆ ಸಾಗರದಾಚೆಗೂ ಹಬ್ಬಿದೆ.ಇದು ಕನ್ನಡ ನೆಲದ ಸಾತ್ವಿಕ ಶಕ್ತಿ. ಉತ್ತರ ಕರ್ನಾಟಕವನ್ನೇ ಕೇಂದ್ರೀಕರಿಸಿ ಭಾಷಣ ಮಾಡಿದರು ಸಿಎಂ ಕುಮಾರಸ್ವಾಮಿ.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ
ಜ್ಯೋತಿ ಬಲದಿಂದ ತಮಂಧದ ಕೇಡು ನೋಡಯ್ಯ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ
ಎಂಬ ಬಸವಣ್ಣನವರ ವಚನ ಪ್ರಸ್ತಾಪಿಸಿದ ಅವರು, ಈ ವಚನವೇ ನಮ್ಮ ಆದರ್ಶ
ಅರಿವಿನ ಕೊರತೆ ನಿವಾರಿಸಿ, ಬೆಳಕಿನ ಹೊನಲು ಹರಿಸಿ, ಪ್ರಾಮಾಣಿಕವಾದೊಂದು, ಪ್ರಭುದ್ವವಾದೊಂದು ನಾಡು ಕಟ್ಟುವುದೇ ನಮ್ಮ ಗುರಿ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401