ರಾಜಕೀಯ
ಕೊಡಗು ಪ್ರವಾಹ : ಎಚ್, ಡಿ.ಕೆ ದೆಹಲಿ ಭೇಟಿ ; ಕೇಂದ್ರಕ್ಕೆ ಮಧ್ಯಂತರ ಪರಿಹಾರ ನೀಡು ವಂತೆ ಮನವಿ
ಸುದ್ದಿದಿನ, ನವದೆಹಲಿ : ಕೊಡಗನಲ್ಲಿ ಮಳೆಯಿಂದ ಅತಿವೃಷ್ಟಿ ಹಿನ್ನೆಲೆ ಪ್ರಧಾನಿ ಕಾರ್ಯಲಯದ ಸಚಿವ ಜೀತೆಂದ್ರ ಸಿಂಗ್ ಅವರನ್ನು ನವದೆಹಲಿಯಲ್ಲಿ ಅವರು ಇಂದು (ಆಗಸ್ಟ್ 30 ರಂದು) ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿಯಾದರು.
ನವದೆಹಲಿಯ ನಾರ್ಥಬ್ಲಾಕ್ ನಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಭೇಟಿಯಾಗಿ ಅತಿವೃಷ್ಟಿ ಯಿಂದ ಮೂರು ಸಾವಿರ ಕೋಟಿ ನಷ್ಟ ವಾಗಿದ್ದು, ರಾಜ್ಯ ಸರ್ಕಾರ ಕೇಂದ್ರದ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದೆ. ಕೂಡಲೇ ಮಧ್ಯಂತರ ಪರಿಹಾರ ನೀಡುವಂತೆ ಮನವಿ ಮಾಡಲಿರುವ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ. ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾಗಿ ಕರ್ನಾಟಕದ ನೆರೆ ಹಾಗೂ ಬರ ಪರಿಸ್ಥಿತಿ ಕುರಿತು ಚರ್ಚಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401