ರಾಜಕೀಯ
ಪರಮೇಶ್ವರ್ v/s ರಾಮಲಿಂಗಾರೆಡ್ಡಿ | ಬಿಬಿಎಂಪಿ ಗದ್ದುಗೆ ಯಾರ ಪಾಲಿಗೆ ?
ಸುದ್ದಿದಿನ ಡೆಸ್ಕ್ : ಬಿಬಿಎಂಪಿ ಗದ್ದುಗೆ ಹಿಡಿಯಲು ಕಾಂಗ್ರೆಸ್ ನಾಯಕರಲ್ಲೆ ಫೈಟ್ ಶುರುವಾಗಿದೆ. ಬೆಂಗಳೂರು ಉಸ್ತುವಾರಿ ಸಚಿವ ಜಿ ಪರಮೇಶ್ವರ್ ವಿರುದ್ಧ ರೆಡಿ ಆಗುತ್ತಿದೆ ಬೆಂಗಳೂರು ಕೈಪಡೆ.
ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಪರಮೇಶ್ವರ್ ಗೆ ಕಾದಿದೆಯಾ ಶಾಕ್? ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಪರಮೇಶ್ವರ್ ಹೇಳಿದ ಅಭ್ಯರ್ಥಿಗೆ ಮಣೆ ಹಾಕದಿರಲು ನಡೀತಾ ಇದೆ ಪ್ಲಾನ್ ಅಂತಲೂ ಅನುಮಾನ ಶುರುವಾಗಿದೆ.ಇದಕ್ಕೆ ಕಾರಣ ಬೆಂಗಳೂರಿನ ಕೆಲ ಶಾಸಕರು ಮತ್ತು ಪರಿಷತ್ ಸದಸ್ಯರಿಗೆ ಪರಂ ಬೆಂಬಲ ಕೊಡ್ತಾ ಇಲ್ಲ ಅನೋದಾಗಿದೆ.
ಹಾಗಾಗೀ ರಾತ್ರೋರಾತ್ರಿ ಸಭೆ ನಡೆಸಿದ ಕೆಲ ಕೈ ಶಾಸಕರು. ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಗೆ ಆರು ಜನ ಶಾಸಕರು 13 ಕಾರ್ಪೋರೇಟರ್ಸ್ ಭಾಗಿಯಾಗಿದ್ದಾರೆ. ಈ ಬಾರಿ ಮೇಯರ್ ಪಟ್ಟ ಜನರಲ್ ಮಹಿಳೆಗೆ. ಮೇಯರ್ ಮೀಸಲಾತಿ ಬದಲಾವಣೆಯಾಗಬೇಕೆಂದು ಪರಂ ಸರ್ಕಾರಕ್ಕೆ ಮನವಿ ಮಾಡಿದ್ರು. ಆದರೆ ಮೇಯರ್ ಮೀಸಲಾತಿ ಬದಲಾವಣೆಯಾಗಬಾರದೆಂದು ಬೆಂಗಳೂರು ಶಾಸಕರ ಪಟ್ಟು ಹಿಡಿದ್ದಿದ್ದಾರೆ.