ದಿನದ ಸುದ್ದಿ
ದಾವಣಗೆರೆ | ಒಟ್ಟು 2840 ಕೊರೋನಾ ಕೇಸ್ : 1745 ಗುಣಮುಖ
ಸುದ್ದಿದಿನ, ದಾವಣಗೆರೆ : ಜಿಲ್ಲೆಯಲ್ಲಿ ಬುಧವಾರ 224 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 91 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, 06 ಸಾವು ಸಂಭವಿಸಿದೆ.
ಬುಧವಾರ ದಾವಣಗೆರೆಯಲ್ಲಿ 140, ಹರಿಹರದಲ್ಲಿ 37, ಜಗಳೂರಿನಲ್ಲಿ 06, ಚನ್ನಗಿರಿ 22, ಹೊನ್ನಾಳಿ 10 ಹಾಗೂ ಅಂತರ್ ಜಿಲ್ಲೆಯಿಂದ 09 ಕೋವಿಡ್-19 ಪ್ರಕರಣಗಳು ವರದಿಯಾಗಿವೆ.
ತಾಲ್ಲೂಕುವಾರು ಬಿಡುಗಡೆಯಾದವರು- ದಾವಣಗೆರೆಯಿಂದ 50, ಹರಿಹರದಿಂದ 11, ಜಗಳೂರಿನಿಂದ08, ಚನ್ನಗಿರಿಯಿಂದ 02, ಹೊನ್ನಾಳಿ 17, ಅಂತರ್‍ಜಿಲ್ಲೆಯಿಂದ 03 ಸೇರಿದಂತೆ ಒಟ್ಟು 91 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 2840 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 1745 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 68 ಸಾವು ಸಂಭವಿಸಿದ್ದು, ಪ್ರಸ್ತುತ 1027 ಸಕ್ರಿಯ ಪ್ರಕರಣಗಳು ಇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243