ದಿನದ ಸುದ್ದಿ
ದಾವಣಗೆರೆ | ರಾತ್ರೋರಾತ್ರಿ ಕೊರೋನಾ ಮೃತ ದೇಹಗಳ ಶವಸಂಸ್ಕಾರ : ಎಸ್ ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ
ಸುದ್ದಿದಿನ,ದಾವಣಗೆರೆ: ಸ್ಥಳೀಯ ಕಾರ್ಪೋರೇಟರ್‌ಗೂ ಮಾಹಿತಿ ನೀಡದೆ ಹಿಂದು ರುದ್ರಭೂಮಿಯಲ್ಲಿ ಕೋವಿಡ್ 19 ತಗುಲಿದ ಸೋಂಕಿತರ ಮೃತ ದೇಹಗಳನ್ನು ಹೂಳಿದ ಹಿನ್ನಲೆಯಲ್ಲಿ ದಾವಣಗೆರೆಯ ಎಸ್ಓಜಿ ಕಾಲೋನಿ ಜನತೆ ಸ್ಮಶಾನದ ಬಳಿ ಪ್ರತಿಭಟನೆ ಮಾಡಿದಂತ ಘಟನೆ ಸೋಮವಾರ ನಡೆದಿದೆ.
31ನೇ ವಾರ್ಡಿನ ಎಸ್ ಓಜಿ ಕಾಲೋನಿಯ ರುದ್ರಭೂಮಿಯಲ್ಲಿ ಕಳೆದ ಎರಡು ದಿನದ ಹಿಂದೆ ನಾಲ್ಕು ಕೋವಿಡ್ ಸೋಂಕಿತರ ಮೃತದೇಹಗಳನ್ನು ಮಣ್ಣು ಮಾಡಿದ್ದು, ಆ ಜಾಗವನ್ನು ನಾಯಿಗಳು ಕೆದರಿವೆ ಎನ್ನಲಾಗಿದೆ.
ಈ ವಿಷಯ ಸ್ಥಳೀಯ ಕಾರ್ಪೋರೇಟರ್ ಹಾಗೂ ಸಾರ್ವಜನಿಕರ ಗಮನಕ್ಕೆ ಬಂದಿರಲಿಲ್ಲ. ಆದರೆ ಇಂದು ವಿಷಯ ತಿಳಿಯುತ್ತಿದ್ದಂತೆ ರುದ್ರಭೂಮಿ ಬಳಿ ನೂರು ಸಂಖ್ಯೆಯಲ್ಲಿ ಜಮಾಯಿಸಿದ್ದ ಸ್ಥಳೀಯರು ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ಅವೈಜ್ಞಾನಿಕವಾಗಿ ಮೃತ ದೇಹಗಳ ಮಣ್ಣು ಮಾಡಿ ಹೋಗಿರುವುದಾಗಿ ಆರೋಪಿಸಿ ಪ್ರತಿಭಟಿಸಿದ್ದಾರೆ.
ಗ್ರಾಮದ ಪಕ್ಕದಲ್ಲೇ ಇರುವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದು ಸರಿಯಲ್ಲ. ಎಸ್ ಓಜಿ ಕಾಲೋನಿಯಲ್ಲಿ ಇದುವರೆಗೂ ಕರೋನಾ ಸೋಂಕು ಇಲ್ಲ. ಈಗ ಮೃತದೇಹವನ್ನು ರಾತ್ರೋರಾತ್ರಿ ದಫನ್ ಮಾಡಿರುವುದು ಸರಿಯಲ್ಲ ಎಂದು ನಗರ ಪಾಲಿಕೆ, ಜಿಲ್ಲಾಡಳಿತ ವಿರುದ್ಧ ದಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಕೂಡಲೇ ಸ್ಮಶಾನಕ್ಕೆ ಸ್ಯಾನಿಟೇಸ್ ಮಾಡಬೇಕು ಜೊತಗೆ ಸ್ಮಶಾನ ಕಾವಲುಗಾರನನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243