ದಿನದ ಸುದ್ದಿ
ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಸಮಾಜ ಸೇವಕ : ಇದು ಕೊರೊನಾ ಗೆದ್ದು ಬಂದವನ ಸೇವೆ
- ವರದಿ: ಗಿರಿಧರ್ ಕೊಂಪುಳೀರಾ
ಸುದ್ದಿದಿನ, ಕೊಡಗು : ಅಂದು ಸಣ್ಣದೊಂದು ಶೀತ ಜ್ವರ,ತನ್ನ ಮಗನಿಗೂ ಅದೇ ರೀತಿಯಾಗಿತ್ತು, ದೇವದೆಲ್ಲಡೆ ಅದೇನೋ ವಿಷಮ ಗಾಳಿಯಿಂದ ಖಾಯಿಲೆ ಹರಡುತಿದೆ,ಪರೀಕ್ಷಿಕೊಳ್ಳಿ ಎಂದು ಸರ್ಕಾರಗಳು ಪ್ರಚಾರ ಮಾಡುತ್ತಿದ್ದವು,ಯಾವುದಕ್ಕೂ ಪರೀಕ್ಷೆಗೆ ಹೋದರೆ ಸಾಲುಸಾಲು ಜನ ಮೂಗಿನಿಂದ,ಬಾಯಿಂದ ಸ್ಯಾಂಪಲ್ ಪಡೆಯುವುದು,ಇಷ್ಟು ಮಾಡುವುದಕ್ಕೆ ಒಂದು ದಿನವೇ ಸವೆದುಹೋಯಿತು, ಊಟವಿಲ್ಲ ನೀರಿಲ್ಲ,ತಾನೇಗೋ ಇರುತ್ತೇನೆ ಪುಟ್ಟ ಮಗನ ಕಥೆಯೇನು..?
ಹೌದು ಸಮಾಜ ಸೇವಕ ,ವೃತ್ತಿಯಲ್ಲಿ ವಕೀಲ,ಕೊಡಗಿನ ಹಿತ ಕಾಪಾಡಲು ಸದಾ ಮುಂದೆಯಿರುವ ಇವರ ಹೆಸರು
ಪವನ್ ಪೆಮ್ಮಯ್ಯ,ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿರುವ ಇವರು ಅದೆಲ್ಲಿಂದ ಕೊರೊನಾ ಒಕ್ಕರಿಸಿತೋ ಗೊತ್ತಿಲ್ಲ ದಿನನಿತ್ಯ ಸಾವಿರಾರು ಜನರು ಬರುವ ಜಿಲ್ಲಾ ನ್ಯಾಯಾಲಯ,ಜನರ ಮಧ್ಯೆಯೇ ಸೇವೆಗಳಲ್ಲಿ ಇರುವುದರಿಂದಲೋ ಕೊರೊನಾ ಪಾಸಿಟಿವ್ ಅಂತಾ ಧೃ಼ಡಪಟ್ಟು, ಆಸ್ಪತ್ರೆಯಲ್ಲಿ ಸಿಕ್ಕಿದ ಪುಡ್ಡು,ಬೆಡ್ಡು ಚಿಕಿತ್ಸೆಗೆ ಮಾತ್ರೆ ನುಂಗಿ ಕೊರೊನಾ ತನ್ನಿಂದ ಓಡಿಹೋಗುವಷ್ಟರ ಮಟ್ಟಿಗೆ ನಾಜೂಕಾಗಿ ಚಿಕಿತ್ಸೆ ತೆಗೆದುಕೊಂಡರು.
ಆಸ್ಪತ್ರೆಯಿಂದ ಯುದ್ದ ಗೆದ್ದ ಸಂಭ್ರಮವೇನೋ ಇತ್ತು ಆದರೆ ತಾನು ಕ್ವಾರಂಟೈನ್ ನಲ್ಲಿದ್ದ ಸಂದರ್ಭ ಆದ ಅನುಭವದಿಂದ ನಲುಗಿ ಇದೀಗ ಮತ್ತೆ ಜನರ ಮಧ್ಯೆ ಬಂದಿದ್ದಾರೆ.ಹೌದು ಕೊರೊನಾ ಪಾಸಿಟಿವ್ ಆಗಿ ನರಳುವ ರೋಗಿಗಳ ಕಷ್ಟ ಒಂದಡೆಯಾದರೆ,ಇನ್ನೊಂದೆಡೆ ಕೊರೊನಾ ಪೀಡಿತ ವ್ಯಕ್ತಿಯ ಮನೆಯವರ ಪಾಡು.
ಇದನ್ನೂ ಓದಿ |ಲಾಕ್ ಡೌನ್ ನಡುವೆ ಸಪ್ತಪದಿ ತುಳಿದ ನಟ ಚಂದನ್-ಕವಿತ
ಇದೀಗ ಲಾಕ್ ಡೌನ್,ಮಡಿಕೇರಿಯಲ್ಲಿ ಮಳೆ ಸಹ ಶುರುವಾಗಿದೆ.ಶುದ್ದ ಕುಡಿಯುವ ನೀರು ಆಸ್ಪತ್ರೆಯಲ್ಲಿದ್ದರೂ ಕುಡಿಯುವ ಹಾಗಿಲ್ಲ,ಮಕ್ಕಳು,ವೃದ್ದರೆನ್ನದೆ ಆಸ್ಪತ್ರೆಯತ್ತ ಮುಖ ಮಾಡುವ ಮಂದಿ ಹೊಟೇಲುಗಳಿಲ್ಲದೆ, ಆಹಾರಕ್ಕೂ ಪರದಾಡುವಂತಹವರಿಗೆ ಪವನ್ ಅನಧಾತರಾಗಿದ್ದಾರೆ.
ದಿನನಿತ್ಯ ಮಡಿಕೇರಿ ಜಿಲ್ಲಾಸಪ್ಪತ್ರೆ ಎದುರು ಒಂದೆರೆಡು ಯವಕರನ್ನು ಸೇರಿಸಿಕೊಂಡು ದಿನನಿತ್ಯ 300 ಮಂದಿಗೆ ತಾವೇ ಮನೆಯಲ್ಲಿ ತಯಾರಿಸಿ ಹೊಟ್ಟೆ ತುಂಬುವಷ್ಟು ನೀರು,ದೋಹ ತಣಿವಷ್ಟು ನೀರಿನ ವ್ಯವಸ್ಥೆಯನ್ನು ಆಸ್ಪತ್ರೆಯ ಬಳಿಯಲ್ಲೇ ಕೊರೊನಾದ ಸಕಲ ನಿಮ ಪಾಲಿಸಿಕೊಂಡು,ಅವರ ಬಳಿಗೆ ಬರುವವರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ.
ಆರಂಭದಲ್ಲಿ ಸ್ವಂತ ಖರ್ಚಿನಿಂದ ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಈ ಕಾರ್ಯಕ್ಕೆ,ಸ್ನೇಹಿತರು ಹಿತೈಶಿಗಳ ಪ್ರೋತ್ಸಾಹವಿದೆ. ಏನೇ ಆಗಲಿ ಸಮಾಜದಲ್ಲಿ ಕೊರೊನಾ ಜೊತೆಗೂ ಇತರರೊಂದಿಗೆ ಬೆರೆಯಬಹುದು,ಅವರ ಕಷ್ಟ ಸುಖದಲ್ಲಿ ಸುರಕ್ಷಿತವಾಗಿ ಭಾಗಿಯಾಗುತ್ತಿರುವುದಕ್ಕೆ ಇದಕ್ಕಿಂದ ಉದಾಹರಣೆ ಬೇಕಿಲ್ಲ.
ಕೃಪೆ : Mangalore information
ಸುದ್ದಿದಿನ.ಕಾಂ|ವಾಟ್ಸಾಪ್|9980346243