ದಿನದ ಸುದ್ದಿ

ಕೊರೋನಾ ಲಸಿಕೆ ಪಡೆದ ಐವರು ವೈದ್ಯರಿಗೆ ಕೊರೋನಾ ಪಾಸಿಟಿವ್..!

Published

on

ಸುದ್ದಿದಿನ,ಚಾಮರಾಜನಗರ: ನಗರದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದ ಐವರು ವೈದ್ಯರಲ್ಲಿ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ.

ವಾರದ ಹಿಂದೆಯಷ್ಟೇ ಈ ಐವರು ವೈದ್ಯರು ವಾರದ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದು, ಲಸಿಕೆ ಪಡೆದ 7 ಮಂದಿ ವೈದ್ಯರಲ್ಲಿ ಐವರು ವೈದ್ಯರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾ‌ಗಿದೆ. ಈ ಐವರು ವೈದ್ಯರು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದಿದ್ದರು. ಲಸಿಕೆ ಪಡದ ಏಳು ಮಂದಿ ವೈದ್ಯರಲ್ಲಿ ಆರು ಮಂದಿ ವೈದ್ಯರನ್ನು ಹೋಂ ಐಸೋಲೇಷನ್ ಹಾಗೂ ಒಬ್ಬರಿಗೆ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಚಾಮರಾಜನಗರದ ಡಿಎಚ್‍ಒ ಡಾ.ರವಿ ಅವರು ಈ ಸಂಬಂಧ ಮಾಹಿತಿಯನ್ನು ನೀಡಿದ್ದು, ನಮ್ಮಲ್ಲಿ ಲಸಿಕೆ ಪಡೆದ ಏಳು ಮಂದಿ ವೈದ್ಯರಿಗೆ ಈ ಹಿಂದೆ ಕೊರೋನಾ ಪಾಸಿಟಿವ್ ಬಂದಿತ್ತು. ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವಾರಿಯರ್ ಆಗಿ ಕಾರ್ಯ ನಿರ್ವಹಿಸಿದ್ದ ಈ ಏಳು ವೈದ್ಯರು ಕಳೆದ ವಾರದ ಹಿಂದೆ ಕೊರೋನಾ ಲಸಿಕೆಯನ್ನು ಪಡೆದಿದ್ದರು. ಅದರಲ್ಲಿ ಕೊರೋನಾ ಲಸಿಕೆ ಪಡೆದಿದ್ದ ಐದು ಜನ ವೈದ್ಯರಿಗೆ ಕೊರೋನಾ ಪಾಸಿಟಿವ್ ಬಂದಿದೆ.

ಮೂವರು ವೈದ್ಯರು ಕೊವಾಕ್ಸಿನ್, ಇಬ್ಬರು ವೈದ್ಯರು ಕೋವಿಶೀಲ್ಡ್ ಲಸಿಕೆಯನ್ನು ಪಡೆದಿದ್ದರು. ಈ ಐವರು ವೈದ್ಯರ ಜತೆ ಸಂಪರ್ಕದಲ್ಲಿದ್ದವರಿಗೆ ಈಗಾಗಲೇ ಕೊವಿಡ್ ಟೆಸ್ಟ್ ನಡೆಸಲಾಗಿದೆ. ಕೊರೋನಾ ಲಸಿಕೆಯನ್ನು ಪಡೆದ ಐವರು ವೈದ್ಯರಿಗಷ್ಟೇ ಕೊರೋನಾ ಪಾಸಿಟಿವ್ ಬಂದಿದೆ. ಉಳಿದ ವೈದ್ಯ ಸಿಬ್ಬಂದಿಯಲ್ಲಿ ಕೊರೋನಾದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದ್ದರಿಂದ ಜಿಲ್ಲೆಯ ಸಾರ್ವಜನಿಕರು ಯಾರೂ ಕೂಡ ಆತಂಕವನ್ನು ಪಡುವ ಅಗತ್ಯವಿಲ್ಲ. ಪಾಸಿಟಿವ್ ಬಂದಿರುವ ವೈದ್ಯರು ಆರೋಗ್ಯವಾಗಿದ್ದಾರೆ ಎಂದು ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version