ದಿನದ ಸುದ್ದಿ
ದಾವಣಗೆರೆ ಬ್ರೇಕಿಂಗ್ | ನಿನ್ನೆ ನರ್ಸ್, ಇಂದು ವೃದ್ದರೊಬ್ಬರಿಗೆ ಕೊರೊನಾ ಪಾಸಿಟಿವ್ : ಜನರಲ್ಲಿ ಹೆಚ್ಚಿದ ಆತಂಕ
ಸುದ್ದಿದಿನ, ದಾವಣಗೆರೆ : ಗ್ರೀನ್ ಝೋನ್ ನಲ್ಲಿದ್ದ ದಾವಣಗೆರೆಯಲ್ಲಿ ಬುಧವಾರ ನರ್ಸ್ ಗೆ ಕೊರೊನಾ ಪಾಸಿಟಿವ್ ಎಂದು ದೃಢಪಡಿಸಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿರುವುದು ದಾವಣಗೆರೆ ಜನರ ಆತಂಕಕ್ಕೆ ಕಾರಣವಾಗಿದೆ.
ನಗರದಲ್ಲಿ ಎರಡನೇ ಪ್ರಕರಣ ಬೆಳಕಿಗೆ ಬಂದಿದ್ದು, 69 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ವೃದ್ಧ ವಾಸವಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಒಂದು ವರ್ಷದ ಮಗು, ಮೂರು ವರ್ಷದ ಮಗು ಸೇರಿದಂತೆ 9 ಜನರಿಗೆ ಕೊರೊನಾ ಪರೀಕ್ಷೆ ನಡೆದಿದ್ದು, ಇವರೆಲ್ಲ ವೃದ್ಧನ ಕುಟುಂಬಸ್ಥರು ಎನ್ನಲಾಗಿದೆ. ಉಸಿರಾಟ ತೊಂದರೆಯಿಂದ ವೃದ್ಧ ಆಸ್ಪತ್ರೆಗೆ ದಾಖಲಾಗಿದ್ದರು. ವೃದ್ಧನಿಗೆ ಸೋಂಕು ಎಲ್ಲಿಂದ ಬಂತು ಎಂಬುದು ಪತ್ತೆಯಾಗಿಲ್ಲದ ಕಾರಣ ದಾವಣಗೆರೆ ಜನತೆಯ ಆತಂಕ ಇಮ್ಮಡಿಕೊಂಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243