ಅಂತರಂಗ

ಯಾವ “ಚಪ್ಪಾಳೆ” ಇವರ ಉಪಕಾರ ತೀರಿಸೀತು..?!

Published

on

ಡಾ| ಶಿರೀನ್ ರೌಹಾನಿ ರಾದ್
  • ರಾಜಾರಾಮ್ ತಲ್ಲೂರ್

ವರು ಡಾ|ಶಿರೀನ್ ರೌಹಾನಿ ರಾದ್. ಇರಾನಿನ ಪಕ್ದಾಸ್ಥ್ ಎಂಬಲ್ಲಿ ವೈದ್ಯಕೀಯ ವೃತ್ತಿ ಮಾಡಿಕೊಂಡಿದ್ದರು. ಪರಿಸ್ಥಿತಿ ಹದಗೆಟ್ಟಾಗ ಆವರನ್ನು ಟೆಹರಾನ್ ನಲ್ಲಿ ಮುಖ್ಯ ಆಸ್ಪತ್ರೆಯೊಂದರಲ್ಲಿ ಸೇವೆಗೆ ಕರೆಸಿಕೊಳ್ಳಲಾಯಿತು.

ಅವರ ಕೈಗಳನ್ನು ಗಮನಿಸಿ. ತಾವು ಸ್ವತಃ ಕೊರೋನಾ ಪೀಡಿತರಾಗಿ, ರಕ್ತನಾಳದ ಮೂಲಕ ಔಷಧಿ ತೆಗೆದುಕೊಳ್ಳುತ್ತಾ (IV) , ತನ್ನ ಸೀಟಿನಲ್ಲಿ ಕುಳಿತು ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.

ದುರದೃಷ್ಟವಶಾತ್ ನಿನ್ನೆ (19-3-2020) ಅವರು ಇದೇ ಕೊರೋನಾ ಸೋಂಕು ಉಲ್ಭಣಿಸಿ ತೀರಿಕೊಂಡಿದ್ದಾರೆ. ಕೊನೆಕ್ಷಣದ ತನಕವೂ ಅವರು ತಮ್ಮ ರೋಗಿಗಳ ಆರೈಕೆಯಲ್ಲಿ ನಿರತರಾಗಿದ್ದರು.

ಅವರ ತ್ಯಾಗಕ್ಕೆ ಎಣೆಯಿಲ್ಲ. ಡಾಕ್ಟರ್ ಶಿರೀನ್ ಮಾನವ ಜನಾಂಗ ನಿಮ್ಮನ್ನು ಮರೆಯದು.
ಕಳೆದ ಒಂದು ತಿಂಗಳಿನಲ್ಲಿ ಇಂಥಹ “ಅನ್ ಸಂಗ್ ಹೀರೋಗಳು” ಅದೆಷ್ಟೋ ಮಂದಿ ಆಗಿಹೋಗಿರಬಹುದು ಈ ಜಗತ್ತಿನಲ್ಲಿ.

ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ

Female physician Dr. Shirin Rouhani Rad dies after battling coronavirus

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version