ದಿನದ ಸುದ್ದಿ

ದುಬಾರೆ ರ್ಯಾರ್ಫ್ಟಿಂಗ್‍ಗೆ ಕೋರ್ಟ್ ಸಮ್ಮತಿ

Published

on

ಸುದ್ದಿದಿನ ಡೆಸ್ಕ್:  ಕೊಡಗಿನ ದುಬಾರೆ ಅರಣ್ಯಧಾಮದಲ್ಲಿ ನಡೆಯುತ್ತಿದ್ದ ರ್ಯಾಫ್ಟಿಂಗ್ ಮೇಲೆ ಜಿಲ್ಲಾಧಿಕಾರಿ ವಿಧಿಸಿದ್ದ ನಿರ್ಬಂಧವನ್ನು ಹೈ ಕೋರ್ಟ್ ವಜಾಗೊಳಿಸಿದೆ.

ದುಬಾರೆ ಸೇರಿದಂತೆ ಕಾವೇರಿ ನದಿಯಲ್ಲಿ ನಡೆಯುತ್ತಿದ್ದ ರ್ಯಾಫ್ಟಿಂಗ್‍ಗೆ ದುಬಾರಿ ಶುಲ್ಕ ವಿಧಿಸುತ್ತಿದ್ದ ಹಿನ್ನೆಲೆಯಲ್ಲಿ ಇದನ್ನು ಮನಗಂಡು ಕೊಡಗು ಜಿಲ್ಲಾಡಳಿತವು ರ್ಯಾಫ್ಟಿಂಗ್ ಮೇಲೆ ನಿರ್ಬಂಧ ಹೇರಲಾಗಿತ್ತು. ಇದನ್ನು ಪ್ರಶ್ನಿಸಿ ರ್ಯಾಫ್ಟಿಂಗ್ ಗುತ್ತಿಗೆದಾರರು ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಈ ಪೈಕಿ ಸೋಮವಾರಪೇಟೆ ಮೂಲದ ಲೈಸನ್ಸ್ ಹೋಲ್ಡರ್ ಬಿ.ಸಿ. ಮಾದಯ್ಯ ಅವರು ಹೈ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ಕೋರ್ಟ್, ಜಿಲ್ಲಾಧಿಕಾರಿ ಆದೇಶವನ್ನು ವಜಾಗೊಳಿಸಿ ರ್ಯಾಫ್ಟಿಂಗ್‍ಗೆ ಅನುಮತಿ ನೀಡಿದೆ.

ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್ ನಡೆಸಲು ಜಿಲ್ಲಾಡಳಿತದಿಂದ ಎನ್‍ಒಸಿ ಪಡೆಯಲಾಗಿದೆ. ಇದಕ್ಕೆ ಹಣ ಕಟ್ಟಿ ಲೈಸನ್ಸ್ ಪಡೆಯಲಾಗದೆ. ಸರಕಾರವೇ ಅನುಮತಿ ನೀಡಿದ್ದರೂ, ದಿಢೀರ್ ಎಂದು ಅನುಮತಿ ರದ್ದುಮಾಡಿ ಗುತ್ತಿಗೆದಾರರಿಗೆ ಅನ್ಯಾಯ ಮಾಡಲಾಗಿದೆ ಎಂದು ಮಾದಯ್ಯ ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version