ದಿನದ ಸುದ್ದಿ
ಕೋವಿಡ್‌ನ ಹೊಸ ಎಕ್ಸ್‌ಇ ರೂಪಾಂತರಿ ; ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ : ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ
ಸುದ್ದಿದಿನ,ದೆಹಲಿ: ವಿಶ್ವದ ಕೆಲವು ದೇಶಗಳಲ್ಲಿ ಕೋವಿಡ್‌ನ ಹೊಸ ಎಕ್ಸ್‌ಇ ರೂಪಾಂತರಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಇಂದು ಸಭೆ ನಡೆಸಿ, ಅಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿದರು.
ಕೊರೊನಾ ರೂಪಾಂತರಿ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಮತ್ತು ಕೊರೊನಾ ಪರೀಕ್ಷೆಗಳನ್ನು ಹೆಚ್ಚು ಮಾಡುವ ಬಗ್ಗೆ ಎಲ್ಲ ಅಧಿಕಾರಿಗಳು ಸಿದ್ಧತೆ ನಡೆಸಬೇಕು ಎಂದು ಸಚಿವರು ತಿಳಿಸಿದರು.
ಕೊರೊನಾ ಚಿಕಿತ್ಸೆಗೆ ಬೇಕಾಗಿರುವ ಎಲ್ಲ ಔಷಧಗಳು ಹೆಚ್ಚು ಪ್ರಮಾಣದಲ್ಲಿ ದೊರೆಯುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ವೈದ್ಯಕೀಯ ಮೂಲ ಸೌಕರ್ಯಗಳನ್ನು ಒದಗಿಸಲು ಈಗಾಗಲೇ ಎಲ್ಲ ರೀತಿಯ ಅನುಮತಿಗಳನ್ನು ನೀಡಲಾಗಿದೆ. ಒಟ್ಟಾರೆಯಾಗಿ ಕೊರೊನಾ ನಾಲ್ಕನೇ ಅಲೆ ನಿಯಂತ್ರಣ ಮಾಡಲು ಈಗಿನಿಂದಲೇ ಸಜ್ಜಾಗಿರಬೇಕು ಎಂದು ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದರು.
ಸಭೆಯಲ್ಲಿ ಹೊಸ ರೂಪಾಂತರಿಗಳ ಅಧ್ಯಯನಕ್ಕೆ ಕಣ್ಗಾವಲು ವ್ಯವಸ್ಥೆಗಳನ್ನು ಬಲಪಡಿಸುವುದರ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.
ಟ್ವೀಟ್
प्रधानमंत्री @NarendraModi जी द्वारा 'अंत्योदय' की प्रेरणा से 2018 में शुरू किए गए आयुष्मान भारत हेल्थ एंड वेलनेस सेंटर की चौथी वर्षगाँठ को एक उत्सव के रूप में मनाने हेतु आज राज्यों एवं केंद्र शासित प्रदेशों के स्वास्थ्य मंत्रियों से चर्चा की। pic.twitter.com/Iyai98p8OL
— Dr Mansukh Mandaviya (@mansukhmandviya) April 12, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243