ದಿನದ ಸುದ್ದಿ

ಸಂತೇಬೆನ್ನೂರು | ಲಾರಿ ಡಿಕ್ಕಿ: ಗ್ರಾಮದ ದೇವಿಗೆ ಬಿಟ್ಟಿದ 2 ಹಸು-1ಕರು ಸಾವು

Published

on

ಸುದ್ದಿದಿನ,ದಾವಣಗೆರೆ: ಎರಡು ಹಸು ಹಾಗೂ ಒಂದು ಕರುವಿಗೆ ಅಪರಿಚಿತ ಲಾರಿಯೊಂದು ಡಿಕ್ಕಿ ಹೊಡೆದಿದ್ದರ ಪರಿಣಾಮ ಸ್ಥಳದಲ್ಲಿಯೇ ಪ್ರಾಣಿಗಳು ಸಾವನಪ್ಪಿರುವ ಘಟನೆ ಜಿಲ್ಲೆಯ, ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ನಡೆದಿದೆ.

ಈ ಹಸುಗಳು ಗ್ರಾಮದ ದೇವಿಗೆ ಬಿಟ್ಟಿದ್ದರು ಎನ್ನಲಾಗಿದ್ದು, ಅಪರಿಚಿತ ಲಾರಿ ಎರಡು ಹಸು ಹಾಗೂ ಒಂದು ಕರುವಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಮೂರು ಮೂಕಪ್ರಾಣಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಈ ಘಟನೆ ಕಂಡ ಸ್ಥಳೀಯರು ಲಾರಿ ಚಾಲಕನ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಸಾಂಪ್ರದಾಯಿಕ ವಿಧಿವಿಧಾನಗಳಂತೆ ಹಸುಗಳ ಅಂತ್ಯಸಂಸ್ಕಾರ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version