ಸಿನಿ ಸುದ್ದಿ
ಸ್ಟ್ರೈಟ್ ಹೇರ್ ಮಾಡಿಸಿಕೊಂಡ ಕ್ರೇಜಿಸ್ಟಾರ್
ಸುದ್ದಿದಿನ ಡೆಸ್ಕ್: ಕ್ರೇಜಿ ಸ್ಟಾರ್ ರವಿಚಂದ್ರನ್ ಕುರುಕ್ಷೇತ್ರ ಸಿನಿಮಾಗಾಗಿ ಮೀಸೆ ತೆಗೆಸಿದ್ದು ಗೊತ್ತೇ ಇದೆ. ಈಗ ರವಿ ಮಾಮ ಹೊಸ ಗೆಟಪ್ ನಲ್ಲಿ ಮಿಂಚುತ್ತಿದ್ದಾರೆ.
ಗುಂಗುರು ಕೂದಲನ್ನೇ ತಮ್ಮ ಟ್ರೇಡ್ ಮಾರ್ಕ್ ಮಾಡಿಕೊಂಡಿದ್ದ ಕ್ರೇಜಿ ಸ್ಟಾರ್ ಈಗ ತಮ್ಮ ಕೂದಲನ್ನು ಸ್ಟ್ರೈಟ್ ಮಾಡಿಸಿಕೊಂಡಿದ್ದಾರೆ.ಸಾಫ್ಟ್ ಮತ್ತು ಸ್ಟ್ರೈಟ್ ಕೂದಲಿನ ಹೊಸ ಅವತಾರದಲ್ಲಿ ಕ್ರೇಜಿಸ್ಟಾರ್ ಕಾಣಿಸಿಕೊಂಡಿರುವ ಫೋಟೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಗುಂಗುರು ಕೂದಲು ಕಪ್ಪು ಕ್ಯಾಪ್, ಕುರುಚಲು ಗಡ್ಡ ಕ್ರೇಜಿಸ್ಟಾರ್ ಅವರ ಗುರುತು. ಇದೀಗ ಹೊಸ ಗೆಟಪ್ ಅನ್ನು ರವಿಚಂದ್ರನ್ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕು.